ಸಿರವಾರ: ಪಟ್ಟಣದ ಈಶ್ವರ ದೇವಸ್ಥಾನ ಆವರಣದಲ್ಲಿ ಅಕ್ಕಮಹಾದೇವಿ ಸಂಫದಿಂದ ಶನಿವಾರ ಶಿವಶರಣೆ ಅಕ್ಕಮಹಾದೇವಿ ಜಯಂತಿ ಆಚರಣೆ ಮಾಡಲಾಯಿತು. ಸಂಘದ ಮಹಿಳೆಯರು ಅಕ್ಕನ ಭಾವಚಿತ್ರಕ್ಕೆ ಮಾಲಾರ್ಪಣೆ, ತೊಟ್ಟಿಲು ಸೇವೆ, ನಾಮಕರಣ, ಉಡಿ ತುಂಬುವ ಕಾರ್ಯ ಮಾಡಿದರು.
ಸಂಘದ ಅಕ್ಕಮಹಾದೇವಿ ನಿಂಬಯ್ಯ ಸ್ವಾಮಿ ಮಾತನಾಡಿ, ಅಕ್ಕಮಹಾದೇವಿ ಅವರು 12ನೇ ಶತಮಾನದಲ್ಲಿ ಮಹಿಳೆಯರಿಗೆ ನ್ಯಾಯ ಒದಗಿಸಲು ಹೋರಾಟ ನಡೆಸಿದರು. ಅವರ ವಚನಗಳು ಇಂದಿಗೂ ಪ್ರಚಲಿತ. ಮಹಿಳೆಯರಿಗೆ ಆದರ್ಶವಾದ ಅಕ್ಕನ ವಚನಗಳನ್ನು ಮಕ್ಕಳಿಗೆ ತಿಳಿಸಬೇಕು. ಅವರ ಜೀವನ ಚರಿತ್ರೆ ಅರಿತು, ಎಲ್ಲರೂ ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.
ಪಪಂ ಮಾಜಿ ಅಧ್ಯಕ್ಷೆ ಲತಾ ಗುರುನಾಥ ನಂದರೆಡ್ಡಿ, ಪ್ರಮುಖರಾದ ಕವಿತಾ ದೇವೇಂದ್ರಸ್ವಾಮಿ. ಚುಕ್ಕಿ ಸುವರ್ಣಮ್ಮ ಸೂಗಪ್ಪ ಸಾಹುಕಾರ್, ಶಿವಲೀಲಾ ಅಚ್ಚ, ರಾಜೇಶ್ವರಿ ಜೇಗರಕಲ್, ಭಾರತಿ ಮಂತ್ರಿ, ಸಿದ್ದಮ್ಮ ಕುಂಬಾರ, ಬೂದೆಮ್ಮ ಕುಂಬಾರ, ವಿದ್ಯಾಶ್ರೀ ಶಿವರಾಜ ಬಳಗಾನೂರು, ಸೌಮ್ಯಾ ಸಜ್ಜನ್, ಸುಮಾ , ರೇಣುಕಾ ನಂದರೆಡ್ಡಿ, ಕಸ್ತೂರಿ ಇತರರಿದ್ದರು.