ಸಿರವಾರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಆಸರೆಯಡಿ ಅಸಹಾಯಕ ಮಹಿಳೆಯರಿಗಾಗಿ ನಿರ್ಮಿಸಿ ಕೊಟ್ಟ ಮನೆಯ ಹಸ್ತಾಂತರ ಕಾರ್ಯಕ್ರಮ ಪಟ್ಟಣದಲ್ಲಿ ಮಂಗಳವಾರ ನಡೆಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಚಂದ್ರಹಾಸ ಅವರು ನೀಲಮ್ಮ ಕಾಲನಿಯ ಜಾಹಿರಾಬೀ ಅವರ ಜೀವನ ನಿರ್ವಹಣೆಗೆ ಈಗಾಗಲೇ ಪ್ರತಿ ತಿಂಗಳು 1 ಸಾವಿರ ರೂ.ಮಾಶಾಸನ ನೀಡಲಾಗುತ್ತಿದೆ. ಗುಡಿಸಲಿನಲ್ಲಿ ವಾಸಿಸುತ್ತಿದ್ದ ಜಾಹಿರಾಬೀ ಅವರಿಗೆ ವಾತ್ಸಲ್ಯ ಆಸರೆ ಯೋಜನೆಯಡಿ ಮನೆ ನಿರ್ಮಿಸಲು 1.15 ಲಕ್ಷ ರೂ. ಮಂಜೂರಾತಿ ನೀಡಲಾಗಿತ್ತು. ಇಂತಹ ಸಾವಿರಾರು ಮಹಿಳೆಯರ ಏಳಿಗೆಗೆ ಮತ್ತು ಸಬಲೀಕರಣದ ಕಾರ್ಯಕ್ರಮಗಳನ್ನು ಮಾತೋಶ್ರೀ ಹೇಮಾವತಿ ಅಮ್ಮ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.