More

    ಭಕ್ತರ ಪ್ರೀತಿ, ಬೆಂಬಲ, ವಿಶ್ವಾಸಕ್ಕೆ ಚಿರಋಣಿ


    ಸಿರವಾರ: ಮಠಕ್ಕೆ ಸೇವಕನಾಗಿ ಕೆಲಸ ಮಾಡಲಾಗುತ್ತಿದೆ ಹೊರತು ಅಧಿಕಾರಿಯಾಗಲ್ಲ ಎಂದು ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ನವಲಕಲ್‌ನಲ್ಲಿ ಲಿಂ.ಸೋಮಶೇಖರ್ ಶಿವಾಚಾರ್ಯ ಸ್ವಾಮಿಗಳ 26ನೇ ಜಾತ್ರಾ ಮಹೋತ್ಸ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಗುರುಗಳ ದೈವ ಇಚ್ಛೆಯಿಂದ ಕಾರ್ಯಗಳು ನಡೆಯುತ್ತಿವೆ. ಮಠದ ಮೇಲೆ ಭಕ್ತರು ಇಟ್ಟಿರುವ ನಂಬಿಕೆಯಿಂದ ಹಿರಿಯ ಶ್ರೀಗಳು ನಡೆಸಿಕೊಂಡು ಬರುತ್ತಿದ್ದಾರೆ. ಭಕ್ತರ ಆಶಯದಂತೆ ರಥ, ದೇವಿಯ ಮಂದಿರ ನಿರ್ಮಾಣ, ಚಿಕ್ಕ ರಥದಂತಹ ಅನೇಕ ಕಾರ್ಯಗಳು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮ ಮಾಡಲಾಗುವುದು ಎಂದರು.

    ಮಠದ ಅಧಿಕಾರಿಯಾಗಿಯಲ್ಲ ಮಠ ಭಕ್ತನಾಗಿ ಮಾಡುವೆ. ಭಕ್ತರ ಪ್ರೀತಿ, ಬೆಂಬಲ, ವಿಶ್ವಾಸಕ್ಕೆ ಚಿರಋಣಿ. ಮುಂದಿನ ದಿನಗಳಲ್ಲಿ ಶ್ರೀಶಾಂಭವಿ ದೇವಿಯ ಮೂರ್ತಿಗೆ ಹಾಗೂ ರಥಕ್ಕೆ ಬೆಳ್ಳಿಯ ಲೇಪನೆ ಮಾಡಿಸಲಾಗುವುದು. ಒಟ್ಟು 51 ಕೆಜಿ ಬೆಳ್ಳಿ ಅವಶ್ಯಕತೆ ಇದ್ದು , ಭಕ್ತರು ಸಮರ್ಪಿಸುತ್ತಿದ್ದಾರೆ ಎಂದರು.

    52 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ನೀಲಗಲ್ ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಗಬ್ಬೂರು ಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ಕರೇಗುಡ್ಡ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ , ರಾಯಚೂರು ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ದೇವಪೂರ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ರಾಯಚೂರು ಅಭಿನವ ರಾಚೋಟಿವೀರ ಶಿವಾಚಾರ್ಯ ಸೋಮವಾರಪೇಟೆ, ನೀಲಗಲ್ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಇರಕಲ್ ಬಸವಪ್ರಾಸದ ಶರಣರು, ಜಾಗಟಗಲ್ ಬೆಟ್ಟಪ್ಪ ತಾತಾ, ಬಲ್ಲಟಗಿ ಗುರುಬಸವ ಸ್ವಾಮೀಜಿ, ಯರಮರಸ್ ಚರಬಸವ ಸ್ವಾಮೀಜಿ, ಮಾಜಿ ಶಾಸಕ ಗಂಗಾಧರ ನಾಯಕ, ಪ್ರಮುಖರಾದ ಚುಕ್ಕಿ ಸೂಗಪ್ಪ ಸಾಹುಕಾರ, ಮಾನಯ್ಯ ನಾಯಕ, ಜೆ.ದೇವರಾಜಗೌಡ, ಶಿವಶರಣಗೌಡ ಲಕ್ಕಂದಿನ್ನಿ, ಶರಣಯ್ಯ ನಾಯಕ, ಸೂರಿ ದುರಗಣ್ಣ ನಾಯಕ, ಆದರ್ಶ ನಾಯಕ, ಅನಿತಾ, ವಿಜಯಲಕ್ಷ್ಮೀ ಆದೆಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts