ಸಿರವಾರದಲ್ಲಿ ತಂಬಾಕು ಅಂಗಡಿಗಳ ಮೇಲೆ ದಾಳಿ, 8 ಸಾವಿರ ರೂ. ದಂಡ

ಸಿರವಾರ: ಪಟ್ಟಣದಲ್ಲಿ ಕೋಟ್ಪಾ 2003 ಕಾಯ್ದೆ ಉಲ್ಲಂಘಿಸಿ ತಂಬಾಕು, ಸಿಗರೇಟ್ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಅಧಿಕಾರಿಗಳು ದಾಳಿ ಮಾಡಿ ದಂಡ ವಿಧಿಸಿದರು.

ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಮೇಲೆ ಶುಕ್ರವಾರ ಜಿಲ್ಲಾ ಆಡಳಿತ, ಜಿಪಂ, ಪೊಲೀಸ್, ಸಾರ್ವಜನಿಕ ಶಿಕ್ಷಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಜಂಟಿಯಾಗಿ ದಾಳಿ ಮಾಡಲಾಯಿತು.

ಅಂಗಡಿಗಳು, ಪಾನ್‌ಶಾಪ್, ಹೋಟೆಲ್ಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಒಟ್ಟು 8 ಸಾವಿರ ರೂ. ದಂಡ ವಿಧಿಸಿದರು. ಈ ಸಂದರ್ಭ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಯಂಕೋಭ ಸರ್ಜಾಪುರ, ಮನಶಾಸ್ತ್ರಜ್ಞ ಮಲ್ಲಿಕಾರ್ಜುನ ಕ್ಯಾದಿಗೇರಾ, ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುನೀಲ್ ಸರೋದೆ, ಸಿಆರ್‌ಸಿ ರವಿ ನಾಯಕ, ಪಪಂ ಕಂದಾಯ ಅಧಿಕಾರಿ ವಿಶ್ವಪ್ರತಾಪ್, ಎಎಸ್‌ಐ ರಾಠೋಡ್ ಇತರರಿದ್ದರು.