ರಾಜ್ಯದಂತೆ ಕೇಂದ್ರದಲ್ಲೂ ಸಮ್ಮಿಶ್ರ ಸರ್ಕಾರ ರಚನೆ – ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯರು ಭವಿಷ್ಯ

ಸಿರವಾರ: ಇಂದಿನ ಯಾವ ರಾಜಕೀಯ ಪಕ್ಷದಲ್ಲೂ ಸಿದ್ಧಾಂತ ಇಲ್ಲ. ಹೀಗಾಗಿ ಸ್ಪಷ್ಟ ಬಹುಮತ ಬರುವುದು ಅನುಮಾನ. ಆದ್ದರಿಂದ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುವ ಲಕ್ಷಣಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತಿವೆ ಎಂದು ಕೇದಾರನಾಥದ 1008 ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಮಹಾಭಗವತ್ಪಾದರು ಹೇಳಿದರು.

ವೈಯಕ್ತಿಕ ರಾಜಕೀಯದಿಂದ ಕೆಸರು ಎರಚಾಟ ನಡೆದಿದೆ. ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದಿಲ್ಲ. ರಾಜ್ಯ ಸರ್ಕಾರದ ರೀತಿಯಲ್ಲಿ ವಿವಿಧ ಪಕ್ಷಗಳ ಸಮ್ಮಿಶ್ರ ಸರ್ಕಾರ ಕೇಂದ್ರದಲ್ಲಿ ರಚನೆಯಾಗಲಿದೆ. ಎಲ್ಲರಿಗೂ ಮತದಾನ ಮಾಡುವ ಹಕ್ಕು ಇದೆ. ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಎಲ್ಲರೂ ಮನವರಿಕೆ ಮಾಡಿಕೊಂಡು ಶೇ.100 ಮತದಾನ ವಾಗಬೇಕಾದರೆ ಇನ್ನೂ ಹಲವು ವರ್ಷಗಳು ಬೇಕು ಎಂದು ನವಲಕಲ್ ಬೃಹನ್ಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಗದಾದ್ಯಂತ ಬರಗಾಲ ಹೆಚ್ಚಾಗಿದೆ. ಕೇದಾರ ಜಗದ್ಗುರುಗಳು ಹೋದಲ್ಲೆಲ್ಲ ಮಳೆಯಾಗುತ್ತಿದೆ. ಜೂನ್‌ನಲ್ಲಿ ಈ ಭಾಗದಲ್ಲೂ ಮಳೆಯಾಗುತ್ತದೆ. ರೈತರು ಆತ್ಮಹತ್ಯೆಯ ಯೋಚನೆ ಮಾಡಬಾರದು ಎಂದರು. ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯರು, ಗಬ್ಬೂರಿನ ಬೂದಿಬಸವ ಶಿವಾಚಾರ್ಯರು ಇದ್ದರು.

Leave a Reply

Your email address will not be published. Required fields are marked *