ಕೊಳವೆಬಾವಿ ಸ್ಫೋಟದ ಸ್ಥಳಕ್ಕೆ ಎಸ್ಪಿ ಭೇಟಿ

ಸಿರವಾರ: ತಾಲೂಕಿನ ಹೀರಾ ಗ್ರಾಪಂ ವ್ಯಾಪ್ತಿಯ ಗ್ರಾಮದ ಹೊರವಲಯದಲ್ಲಿ ಕೊಳವೆಬಾವಿ ಸ್ಫೋಟಗೊಂಡ ಸ್ಥಳಕ್ಕೆ ಎಸ್ಪಿ ಪಿ.ಬಿ.ವೇದಮೂರ್ತಿ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಭೂ ತಜ್ಞರಿಂದ ಮಾಹಿತಿ ಪಡೆದರು.

ನಂತರ ಮಾತನಾಡಿದ ಅವರು, ಎರಡು ವರ್ಷದ ಹಿಂದೆ ಕೊಳವೆ ಬಾವಿ ಕೊರೆಸಿ ಹಾಗೆಯೇ ಬಿಡಲಾಗಿದೆ. ಕಲ್ಲು ಅಡ್ಡ ಬಂದಿದೆ ಎಂದು ನೀರಿನೊಂದಿಗೆ ರಾಸಾಯನಿಕ ಹಾಕಲಾಗಿದೆ. ಹೆಚ್ಚು ರಾಸಾಯನಿಕ ಹಾಕಿದ್ದರಿಂದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದ್ದರಿಂದ 6 ಜನರಿಗೆ ಗಾಯಗಳಾಗಿವೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಡಿವೈಎಸ್ಪಿ ವಿಶ್ವನಾಥ, ಸಿರವಾರ ಪಿಎಸ್‌ಐ ಪಿ.ಸರಳಾ ನಾಯಕ, ಭೂ ತಜ್ಞರು ಇದ್ದರು.

Leave a Reply

Your email address will not be published. Required fields are marked *