ಅಧಿಕಾರಿಗಳ ದಾಳಿ, ಬಾಲಕ ರಕ್ಷಣೆ

ಸಿರವಾರ: ಪಟ್ಟಣದಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಬಾಲಕನನ್ನು ರಕ್ಷಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಮಾನ್ವಿ ಕ್ರಾಸ್ ಹತ್ತಿರದ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕೆಲಸ ಮಾಡುತ್ತಿದ್ದ ತುಂಟಾಪುರದ ಬಾಲಕ ವೀರೇಶನನ್ನು ರಕ್ಷಿಸಿದ್ದಾರೆ. ಜಿಲ್ಲಾ ಬಾಲ ಕಾರ್ಮಿಕ ಯೋಜನಾಧಿಕಾರಿ ಮಂಜುನಾಥ ರೆಡ್ಡಿ, ಮಾನ್ವಿ ಮಕ್ಕಳ ಕಾರ್ಮಿಕ ನಿರೀಕ್ಷಕ ಜನಾರ್ದನ ಕುಮಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹನುಮೇಶ, ಬಿಆರ್‌ಸಿ ಶ್ರೀಶೈಲ ಹಿರೇಮಠ, ರವಿಕುಮಾರ ಇದ್ದರು.