More

  ಯುಸಿಸಿ ಪರ 5 ಲಕ್ಷ ಸಹಿ ಸಂಗ್ರಹದ ಗುರಿ

  ಶಿರಸಿ: ಕೇಂದ್ರ ಸರ್ಕಾರ ಸಮಾನ ನಾಗರಿಕ ಸಂಹಿತೆ ಕಾಯ್ದೆ (ಯುಸಿಸಿ) ಜಾರಿಗೆ ಜನರ ಮಾಹಿತಿ ಕೇಳಿದೆ. ಶ್ರೀರಾಮ ಸೇನೆ 5 ಲಕ್ಷ ಸಹಿ ಸಂಗ್ರಹದ ಗುರಿ ಹೊಂದಿದೆ. ಅದನ್ನು ಪ್ರಧಾನ ಮಂತ್ರಿಗಳಿಗೆ ನೀಡಲು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
  ಶಿರಸಿ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಆರ್‌ಎಸ್‌ಎಸ್ ದಕ್ಷಿಣ ಕ್ಷೇತ್ರೀಯ ಪ್ರಚಾರಕರಾಗಿದ್ದ ಕೇಶವ ಹೆಗಡೆ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
  ಸಂವಿಧಾನದ 45ನೇ ವಿಧಿಯ ಅಡಿಯಲ್ಲಿ ಇದು ಸ್ಪಷ್ಟವಾಗಿದೆ. 76 ವರ್ಷ ಈ ಕಾಯ್ದೆ ಜಾರಿ ಮಾಡದಿರಲು ಮುಸ್ಲಿಂ ತುಷ್ಟೀಕರಣ ಕಾರಣ ಎಂದು ಕಿಡಿಕಾರಿದರು. ಒಂದು ದೇಶ, ಒಂದೇ ಕಾನೂನು ಇರಬೇಕಾದುದು ಸೂಕ್ತ. ಸಮಾನ ನಾಗರಿಕ ಕಾಯ್ದೆ ಇಲ್ಲದಿದ್ದರೆ ಏಕತೆ, ಸಮಾನತೆ ಎನ್ನುವುದು ಧೂಳಿಪಟವಾಗಲಿದೆ. ಪ್ರತಿಯೊಬ್ಬರಿಗೂ ಇದು ಆಗಬೇಕು, ಬರಬೇಕು ಎನ್ನುವುದಿದೆ. ಮುಸ್ಲಿಂ ಮಂಡಳ ಮಾತ್ರ ವಿರೋಧಿಸುತ್ತಿದೆ. ಸಮಾನ ನಾಗರಿಕ ಕಾಯ್ದೆ ಬಂದರೆ ಅವರಿಗೆ ಸಮಾಜದ ಹಿಡಿತ ತಪ್ಪುತ್ತದೆ ಎನ್ನುವ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ. ಮುಸ್ಲಿಂರಲ್ಲಿ ದತ್ತು, ಉತ್ತರಾಧಿಕಾರಿ, ಮಹಿಳೆಗೆ ಆಸ್ತಿ ಹಕ್ಕು ಇಲ್ಲ. ಇವೆಲ್ಲ ಕಾರಣಕ್ಕೆ ವಿರೋಧಿಸುತ್ತಿದ್ದಾರೆ. ಶೇ. 68ರಷ್ಟು ಮುಸ್ಲಿಂ ಮಹಿಳೆಯರು ಸಮಾನ ನಾಗರಿಕ ಕಾಯ್ದೆಗೆ ಸಹಮತ ನೀಡಿದ್ದಾರೆ ಎಂದರು.
  ಗೋವಿನ ತಲೆ ಕಡಿದುದರ ಬಗ್ಗೆ ಪ್ರತಿಭಟಿಸಿದರೂ ಪೊಲೀಸ್ ಇಲಾಖೆ ಆರೋಪಿಯನ್ನು ಬಂಧಿಸಿಲ್ಲ. ಶಾಸಕರು ಸುಮ್ಮನಿರುವುದನ್ನು ವಿರೋಧಿಸುತ್ತೇವೆ. ತಕ್ಷಣ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಹೆಗಡೆಕಟ್ಟಾ ಚಲೋ ಕೈಗೊಳ್ಳಬೇಕಾಗುತ್ತದೆ ಎಂದರು. ಪಠ್ಯದಲ್ಲಿ ವೀರ ಸಾರ್ವಕರ್ ಅವರ ಪಾಠವನ್ನು ತೆಗೆದುಹಾಕಿರುವುದು ಅಕ್ಷಮ್ಯ ಅಫರಾದ. ಸ್ವಾತಂತ್ರೃಕ್ಕಾಗಿ 23 ವರ್ಷ ಅಂಡಮಾನ್ ಜೈಲಿನಲ್ಲಿ ಕಳೆದು ಬಂದವರು ಸಾರ್ವಕರ್. ನೆಹರು, ಗಾಂಧಿ ಅವರು ಅಂತಹ ಜೈಲಿನಲ್ಲಿ ಒಂದು ದಿನವನ್ನೂ ಕಳೆದಿಲ್ಲ ಎಂದರು.
  ಕರ್ನಾಟಕ ಬಿಜೆಪಿ ದಾರಿ ತಪ್ಪಿದೆ. ಹಿಂದುತ್ವ ಮತ್ತು ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ದುಡ್ಡಿನ ಅಹಂಕಾರ, ಹಿಂದುತ್ವದ ಮಧ್ಯೆ ಭಿನ್ನಾಭಿಪ್ರಾಯ ಇದಕ್ಕೆ ಕಾರಣ. ಹಿಂದು ಸಂಘಟನೆಗೆ ಬಲ ತುಂಬುವುದರಿಂದ ಬಿಜೆಪಿ ಬಲಗೊಳ್ಳಬಹುದು. ಇಲ್ಲವಾದರೆ ಬಿಜೆಪಿ ಕರ್ನಾಟಕದಲ್ಲಿ ಇನ್ನೂ ಧೂಳಿಪಟವಾಗಲಿದೆ. ಆದರೆ, ಕೇಂದ್ರದಲ್ಲಿ ನರೇಂದ್ರ ಮೋದಿ ಬರಬೇಕು. ಅದಕ್ಕೆ ಇಲ್ಲಿನ 28 ಸಂಸದರು ಆಯ್ಕೆ ಆಗಬೇಕು. ಅದಕ್ಕಾಗಿ ಶ್ರೀರಾಮ ಸೇನೆಯು ‘ಮೋದಿ ಗೆಲ್ಲಿಸಿ, ದೇಶ ಉಳಿಸಿ’ ಅಭಿಯಾನ ಮಾಡಲಿದೆ ಎಂದರು. ಗೋಪಾಲ ದೇವಾಡಿಗ ಇತರರಿದ್ದರು.

  See also  ‘ಆಟ’ಆಡುತ್ತಿದ್ದವರ ಮೇಲೆ ಶಿಸ್ತುಕ್ರಮ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts