More

  ಧಾರ್ಮಿಕ ಸಂಭ್ರಮದಲ್ಲಿ ಸೇವಾ ಯಜ್ಞ

  ಶಿರಸಿ: ಸ್ವರ್ಣವಲ್ಲೀ ಮಠದಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವಕ್ಕೆ ಧಾರ್ಮಿಕ ಸಂಭ್ರಮ ಧರ್ಮ ಯಜ್ಞದ ಜತೆಗೆ ಆಗಮಿಸುವ ಭಕ್ತರಿಗೆ ಸಕಲ ಸೌಲಭ್ಯ, ಸೌಕರ್ಯ ಒದಗಿಸಲು ಕಾರ್ಯಕರ್ತರು ಸೇವಾ ಯಜ್ಞಕ್ಕೆ ಕಂಕಣ ತೊಟ್ಟಿದ್ದಾರೆ.
  ಫೆ. 18ರಿಂದ ಆರಂಭಗೊಂಡು ಐದು ದಿನಗಳ ಶಿಷ್ಯ ಸ್ವೀಕಾರಕ್ಕೆ ಪ್ರತಿದಿನ 600ಕ್ಕೂ ಅಧಿಕ ಕಾರ್ಯಕರ್ತರು ಅವಿರತ ಕೆಲಸ ಮಾಡುತ್ತಿದ್ದಾರೆ. ಶ್ರೀಮಠದಲ್ಲಿಯೇ 250ಕ್ಕೂ ಅಧಿಕ ಸ್ವಯಂಸೇವಕರು ಐದು ದಿನ ವಾಸ್ತವ್ಯ ಮಾಡಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಯಂಸೇವಕರಾಗಿ ಉದ್ಯೋಗಿಗಳು, ಇಂಜಿನಿಯರ್‌ಗಳು, ರೈತರು, ವಿದ್ಯಾರ್ಥಿಗಳು, ವರ್ತಕರು, ಮಾತೃ ಮಂಡಳಿ, ಮಠದ ವಿವಿಧ ಸಮಿತಿಗಳು, ಅಂಗ ಸಂಸ್ಥೆಯ ಪ್ರಮುಖರು, ಕಾರ್ಯಕರ್ತರು, ಶ್ರದ್ಧಾಳುಗಳು ಸೇರಿ ಅನೇಕರು ಸೇವಾ ಯಜ್ಞದಲ್ಲಿ ತೊಡಗಿದ್ದಾರೆ. ಹವ್ಯಕ, ರಾಮಕ್ಷತ್ರೀಯ, ಮರಾಠ, ಸಿದ್ಧಿ, ಹಾಲಕ್ಕಿ, ಗೌಳಿ, ಕುಣಬಿ ಹಾಗೂ ಇತರ ಸಮಾಜದವರು ಸೇವಾಭಾವದಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಷ್ಯ ಸ್ವೀಕಾರ ಮಹೋತ್ಸವದ ಯಶಸ್ಸಿಗೆ, ಗುರುಗಳ ಸಂಕಲ್ಪಕ್ಕೆ ಕಟಿಬದ್ಧರಾಗಿದ್ದಾರೆ. 80ಕ್ಕೂ ಅಧಿಕ ವೈದಿಕರ ಜತೆಗೆ 90ಕ್ಕೂ ಅಧಿಕ ಪರಿಚಾರಕರು, ದೇವತಾ ಸೇವೆಯಲ್ಲಿ ಪಾರಂಪರಿಕವಾಗಿ ದ್ರವ್ಯ, ಹಣ್ಣು, ಕಾಯಿ, ಪ್ರಸಾರ ಸೇವೆಯಲ್ಲಿ 40ಕ್ಕೂ ಅಧಿಕ ಜನರು ಪಾಳಿ ಪ್ರಕಾರ ಕೆಲಸ ಮಾತ್ತಿದ್ದಾರೆ. ಆಯ್ದ ಕಡೆ ರಕ್ಷಣೆ, ಭದ್ರತೆ ಕೆಲಸವನ್ನೂ ಮಾಡುತ್ತಿದ್ದಾರೆ.
  ಊಟೋಪಚಾರಕ್ಕೆ ಪ್ರತಿ ದಿನ 300 ಕಾರ್ಯಕರ್ತರು ಕಾರ್ಯ ಮಾಡುತ್ತಿದ್ದಾರೆ. ಕೊನೆಯ ಎರಡು ದಿನ ಫೆ. 21 ಮತ್ತು 22ಕ್ಕೆ 600 ರಿಂದ 700 ಕಾರ್ಯಕರ್ತರು ಪ್ರಸಾದ, ಪಾನೀಯ ಸೇವೆ ನೀಡಲು ಸಜ್ಜಾಗುತ್ತಿದ್ದಾರೆ. ಭಕ್ತರಿಗೆ ಊಟೋಪಚಾರ ಒದಗಿಸಲು 40 ಬಾಣಸಿಗರು ಕೆಲಸ ಮಾಡುತ್ತಿದ್ದಾರೆ. ಎಲ್ಲ ಸೇವೆಗೆ ಕಂಟ್ರೋಲ್ ರೂಂ ಮಾಡಲಾಗಿದೆ. ಆರೋಗ್ಯ, ಅಗ್ನಿಶಾಮಕ ದಳ, ಪೊಲೀಸ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ.
  ಯಾಗ, ಹವನ, ಜಪಾನುಷ್ಠಾನ: ಶಿಷ್ಯ ಸ್ವೀಕಾರ ಮಹೋತ್ಸವದ ಅಂಗವಾಗಿ ವಿ. ನಾಗರಾಜ ಭಟ್ಟ ಅವರಿಂದ ಸೋಮವಾರ ಮಹಾರುದ್ರ ಹವನದ ಪೂರ್ಣಾಹುತಿ ನಡೆಯಿತು. ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವಿ. ಚಿನ್ಮಯ ಜೋಶಿ ಬಾಡಲಕೊಪ್ಪ ಹವನದ ಅಧ್ವರ್ಯುವಾಗಿ ವಿ. ಪ್ರಭಾಕರ ಉಪಾಧ್ಯರು ಗೋಕರ್ಣ ಬ್ರಹ್ಮರಾಗಿ, ವಿ. ಬಾಲಚಂದ್ರ ಶಾಸ್ತ್ರಿಗಳು ಸದಸ್ಯರಾಗಿ, ವಿ. ಕೃಷ್ಣ ಜೋಯಿಸರು ಕಲಶಪೂಜೆ ಮಾಡಿದರು. 80ಕ್ಕೂ ಹೆಚ್ಚು ವೈದಿಕರು ಇದ್ದರು. 2500ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಅಕ್ಷರಾಯುತ (3 ಲಕ್ಷ 20 ಸಾವಿರ) ನೃಸಿಂಹ ಮಂತ್ರ ಜಪ ನಡೆಯಿತು. ಉಪನ್ಯಾಸ, ಮಾತೆಯರಿಂದ ಭಜನೆ ಹಾಗು ವಿವಿಧ ಸಾಂಸ್ಕೃತಿಕ ಸಂಭ್ರಮಗಳೂ ನಡೆದವು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts