ಕಾರವಾರ: ಜಿಲ್ಲೆಯ ಶಿರಸಿ-ಕುಮಟಾ ರಸ್ತೆಯಲ್ಲಿ (Sirsi-kumta Road) ವಾಹನ ಸಂಚಾರ ಬಂದ್ ಮಾಡಬೇಕೋ ಬೇಡವೋ ಎಂಬ ವಿಚಾರವಾಗಿ ನಾಯಕರಲ್ಲಿ ಕಚ್ಚಾಟ ಶುರುವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬಂದ್ ಮಾಡಲು ವಿರೋಧವಿದ್ದರೆ, ಉಳಿದ ನಾಯಕರು ಬಂದ್ ಮಾಡಿ ಕಾಮಗಾರಿ ಮಾಡಲಿ ಎಂದು ಹೇಳುತ್ತಿದ್ದಾರೆ. ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಜಿಲ್ಲಾಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬಂದ್ ಮಾಡುವುದು ಅನಿವಾರ್ಯವಾಗಲಿದೆ ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ಸಚಿವ ಮಂಕಾಳ ವೈದ್ಯ ಲೇವಡಿ ಮಾಡಿದ್ದಾರೆ. ಸೋಮವಾರ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ಆರ್.ವಿ.ದೇಶಪಾಂಡೆ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜಿಲ್ಲೆಯನ್ನು ಆಳಿದವರು. ಅನುಭವ ಹೊಂದಿರುವವರು. ಅವರು ಕಾಂಟ್ರಾಕ್ಟರ್‌ಗೆ ಬೆಂಬಲ ಕೊಡುತ್ತಾರೋ, ಜನರಿಗೆ ತೊಂದರೆ ಕೊಡುತ್ತಾರೆ ತಿಳಿಯದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.
ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಅವರ ಕುಟುಂಬಸ್ಥರಿಗೆ ಪರಿಹಾರಧನ ಆದೇಶ ಪತ್ರ ವಿತರಿಸಿ ನಂತರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಉತ್ತರಿಸಿದರು.
Sirsi-kumta Road ಏಕೆ ಬಂದ್ ಮಾಡಬಾರದು.
ಶಿರಸಿ-ಕುಮಟಾ ರಸ್ತೆ ಅಭಿವೃದ್ಧಿ ಮಾಡುವ ಸಂಬಂಧ ಮಾಡಿಕೊಂಡ ಒಪ್ಪಂದದಲ್ಲಿ ವಾಹನ ಸಂಚಾರ ಬಂದ್ ಮಾಡಿ, ರಸ್ತೆ ಅಭಿವೃದ್ಧಿ ಮಾಡುವ ಪ್ರಸ್ತಾಪವೇ ಇಲ್ಲ. ಅಲ್ಲದೆ, ವಾಹನ ಸಂಚಾರವನ್ನು ಬಂದ್ ಮಾಡಿದರೆ ರಸ್ತೆಯ ನಡುವೆ ಇರುವ ಗ್ರಾಮಗಳ ಜನರಿಗೆ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗುತ್ತದೆ. ಇದನ್ನೆಲ್ಲ ತಿಳಿದು ನಾನು ಶಿರಸಿ-ಕುಮಟಾ ವಾಹನ ಸಂಚಾರ ಬಂದ್ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಆದರೆ, ಕಾಗೇರಿ ಹಾಗೂ ದೇಶಪಾಂಡೆ ಅವರೆಲ್ಲ ನಿರ್ಧರಿಸಿದಲ್ಲಿ ನನ್ನದೇನೂ ಆಕ್ಷೇಪಣೆ ಇಲ್ಲ . ನಾನು ಯಾರ ವಿರುದ್ಧವೂ ಮಾತನಾಡುವುದಿಲ್ಲ ಅತ್ತ ಶಿರಸಿ ಶಾಸಕರು, ಇತ್ತ ಕುಮಟಾ ಶಾಸಕರ ನಿರ್ಣಯ ಮಾಡಿದರೆ, ನಾನು ಅದಕ್ಕೆ ಸಿದ್ಧ. ಆದರೆ, ಪ್ರತಿಭಟನೆಗಳು ನಡೆದರೆ, ಅದಕ್ಕೆ ಸಂಸದ ಕಾಗೇರಿ ಅವರೇ ಜವಾಬ್ದಾರರು ಎಂದರು.
ವೆಂಕಟೇಶನೇ ಕಾಪಾಡಲಿ ಈ ಸೇತುವೆ!https://www.vijayavani.net/let-venkatesh-protect-this-bridge