ಶಿರಸಿ- ಕುಮಟಾ ಹೆದ್ದಾರಿ ಅಪಾಯಕಾರಿ? ಮಣ್ಣು ಕುಸಿದು ದುರ್ಗಮಗೊಳ್ಳುವ ಆತಂಕ

ಶಿರಸಿ: ಮಳೆಯ ಅಬ್ಬರದಿಂದಾಗಿ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766ಇಯ ಕೆಲ ಸ್ಥಳಗಳಲ್ಲಿ ಮಣ್ಣು ಸಡಿಲಗೊಂಡು ಕುಸಿಯಲಾರಂಭಿಸಿದೆ. ಇದರಿಂದಾಗಿ ಈ ರಸ್ತೆಯ ಸಂಚಾರ ಇನ್ನಷ್ಟು ದುರ್ಗಮಗೊಳ್ಳುವ ಆತಂಕ ಎದುರಾಗಿದೆ.

ಕಳೆದ ನಾಲ್ಕು ದಿನಗಳ ಸತತ ಮಳೆಯಿಂದಾಗಿ ಈಗಾಗಲೇ ಈ ಮಾರ್ಗದ ಕೆಲವೆಡೆ ಮಣ್ಣು ಕುಸಿತಗೊಂಡಿದೆ. ವಿಶೇಷವಾಗಿ ರಾಗಿಹೊಸಳ್ಳಿಯಿಂದ ಕತಗಾಲವರೆಗಿನ ಪ್ರದೇಶದಲ್ಲಿ ಏಕಾಏಕಿ ಮಣ್ಣು ಕುಸಿತವಾಗುತ್ತಿದೆ. ಇಲ್ಲಿಯ ರಾಗಿಹೊಸಳ್ಳಿ ಭಾಗದಲ್ಲಿ ಕಳೆದ ಮಳೆಗಾಲದಲ್ಲಿಯೂ ಇದೇ ಸ್ಥಿತಿ ಉಂಟಾಗಿತ್ತು.

ರಸ್ತೆ ವಿಸ್ತರಣೆ ವೇಳೆ ಮಣ್ಣು ತೆಗೆದು ಧರೆ ಉಂಟಾಗಿದ್ದ ಪ್ರದೇಶದಲ್ಲಿ ಮಣ್ಣು ಕುಸಿದು ರಸ್ತೆಯ ಮೇಲೆಯೇ ಬೀಳುತ್ತಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಉಪವಿಭಾಗಾಧಿಕಾರಿ ದೇವರಾಜ ಆರ್. ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿ ಭಾರಿ ವಾಹನಗಳ ಸಂಚಾರ ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಇಲ್ಲಿ ಲಾರಿ, ಬಸ್ ಸೇರಿ ಬೃಹತ್ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಮಳೆಗಾಲದ ಬಳಿಕ ಮತ್ತೆ ರಸ್ತೆ ಕಾಮಗಾರಿ ಆರಂಭಗೊಂಡು ಸಂಚಾರ ನಿಷೇಧ ವಾಪಸ್ ಪಡೆಯಲಾಗಿತ್ತು.

ಈ ವರ್ಷ ಬೇಸಿಗೆಯ ವೇಳೆ ಇಲ್ಲಿಯ ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ ಒಂದು ಭಾಗದಲ್ಲಿ ತಡೆಗೋಡೆ ನಿರ್ವಿುಸಿ ವಾಹನ ಸವಾರರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದ್ದರೆ ಇನ್ನೊಂದು ಭಾಗದಲ್ಲಿ ಮಣ್ಣು ತೆಗೆದು ರಸ್ತೆ ವಿಸ್ತರಿಸಿ, ಆ ಭಾಗದಲ್ಲಿ ಚರಂಡಿ ನಿರ್ವಿುಸಲಾಗಿದೆ. ಆದರೆ, ಈಗ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮತ್ತೆ ಇಲ್ಲಿಯ ಮಣ್ಣು ಸಡಿಲಗೊಂಡಿದೆ. ದೇವಿಮನೆ ಘಟ್ಟ ಪ್ರದೇಶದಲ್ಲಿ ಈಗಾಗಲೇ ನಾಲ್ಕಾರು ಕಡೆಗಳಲ್ಲಿ ಮಣ್ಣು ಕುಸಿದು ರಸ್ತೆಯ ಮೇಲೆ ಬಿದ್ದಿದೆ. ಇದರಿಂದಾಗಿ ನಿರ್ವಿುಸಲಾದ ಚರಂಡಿಗಳು ಕಟ್ಟಿ ರಸ್ತೆಯ ಮೇಲೆಯೇ ಬೃಹತ್ ಪ್ರಮಾಣದಲ್ಲಿ ನೀರು ಹರಿಯಲಾರಂಭಿಸಿದೆ.

ಶಿರಸಿಯಿಂದ ದೇವಿಮನೆ ಘಟ್ಟ ಪ್ರದೇಶದ 35 ಕಿ.ಮೀ. ವ್ಯಾಪ್ತಿಯ ರಸ್ತೆಯಲ್ಲಿ ಇನ್ನೂ 16 ಕಡೆಗಳಲ್ಲಿ ಸೇತುವೆ ನಿರ್ವಣವಾಗಬೇಕಿದೆ. ಕಳೆದ ಬೇಸಿಗೆಯಲ್ಲಿ ಈ ಸೇತುವೆ ನಿರ್ವಣದ ಸಲುವಾಗಿ ಗುತ್ತಿಗೆದಾರ ಕಂಪನಿ ಆರ್​ಎನ್​ಎಸ್ ಈ ಸೇತುವೆಗಳ ಪಕ್ಕದಲ್ಲಿ ಬದಲಿ ರಸ್ತೆ ನಿರ್ವಿುಸಿಕೊಂಡು ಸಿದ್ಧತೆ ನಡೆಸಿಕೊಂಡಿತ್ತಾದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ದೇವಿಮನೆ ಘಟ್ಟ ಪ್ರದೇಶದಲ್ಲಿ 16 ಸೇತುವೆಗಳ ನಿರ್ಮಾಣ ಕಾಮಗಾರಿ ಹಾಗೆಯೇ ಉಳಿದುಕೊಂಡಿದೆ. ಈಗ ಈ ಸೇತುವೆ ಪ್ರದೇಶದಲ್ಲಿ ವಾಹನ ಸಂಚರಿಸುವುದೂ ಕಷ್ಟವಾಗಿದೆ. ಕೆಲವೆಡೆ ಆಳದ ಗುಂಡಿಗಳು ಬಿದ್ದಿದ್ದು, ವಾಹನ ದಾಟಿಸಲು ಪರದಾಡುವಂತಾಗಿದೆ.

ಶಿರಸಿ-ಕುಮಟಾ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ಸಲುವಾಗಿ ಜಿಲ್ಲಾಡಳಿತ ಅ. 15ರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿದೆ. ಆದರೆ, ಅಲ್ಲಿಯವರೆಗೆ ಮಣ್ಣು ಕುಸಿತದಿಂದಾಗಿ ವಾಹನ ಸಂಚಾರಕ್ಕೆ ತೊಂದರೆ ಆಗುವ ಸಾಧ್ಯತೆಗಳು ದಟ್ಟವಾಗುತ್ತಿವೆ.

ಶಿರಸಿ- ಕುಮಟಾ ರಸ್ತೆಯಲ್ಲಿ ಮಣ್ಣು ಕುಸಿತದ ಬಗ್ಗೆ ನಿರಂತರವಾಗಿ ಗಮನಿಸುತ್ತಿದ್ದೇವೆ. ಇದುವರೆಗೆ ಶಿರಸಿ ತಾಲೂಕು ವ್ಯಾಪ್ತಿಯಲ್ಲಿ ಸಂಚಾರಕ್ಕೆ ಸಮಸ್ಯೆ ಆಗುವಷ್ಟು ಮಣ್ಣು ಕುಸಿದಿಲ್ಲ. ಆದರೆ, ಸಾಧ್ಯತೆ ದಟ್ಟವಾಗಿರುವುದರಿಂದ ನಾವು ನಿರಂತರ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. | ರಮೇಶ ಹೆಗಡೆ, ತಹಸೀಲ್ದಾರ್ ಶಿರಸಿ

Share This Article

A. P. J. Abdul Kalam ಅವರ ಈ ಟ್ರಿಕ್ಸ್​​ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್​ ಮಾಡ್ದೆ ಅನುಸರಿಸಿ

ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…

ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…

ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…