ಅಡಕೆಗೆ ಕೊಳೆ ರೋಗ ಕಂಟಕ

ಶಿರಸಿ: ಒಂದೆಡೆ ಅಡಕೆಗೆ ಕೊಳೆ ರೋಗ ಬಂದು ಎಳೆ ಅಡಕೆ ಬಹುತೇಕ ಉದುರಿ ಹೋಗಿದೆ. ಇನ್ನೊಂದೆಡೆ ಸಹಕಾರಿ ಸಂಘಗಳಲ್ಲಿ ಪಡೆದ ಬೆಳೆ ಸಾಲ ಮರುಪಾವತಿ ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಮೇ ಅಂತ್ಯದ ವೇಳೆ ಬೆಳೆ ಸಾಲ ತುಂಬಬೇಕಿದೆ. ಈ ವರ್ಷ ಸಾಲ ವಾಪಸಾತಿ ಅವಧಿ ಹೆಚ್ಚಿಸಬೇಕು ಎಂದು ರೈತರೊಂದಿಗೆ ಸಹಕಾರಿ ಸಂಘಗಳೂ ಸರ್ಕಾರವನ್ನು ಆಗ್ರಹಿಸುತ್ತಿವೆ.

ಸಾಮಾನ್ಯವಾಗಿ ಜುಲೈ-ಆಗಸ್ಟ್​ನಲ್ಲಿ ಜಿಲ್ಲೆಯ ಸಹಕಾರಿ ಸಂಘಗಳು ರೈತರಿಗೆ ಬೆಳೆ ಸಾಲ ವಿತರಣೆ ಮಾಡುತ್ತವೆ. ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಕೆಡಿಸಿಸಿ, ಅಪೆಕ್ಸ್ ಬ್ಯಾಂಕ್​ನಲ್ಲಿ ಸಾಲ ಪಡೆದು, ರೈತರಿಗೆ ಸಾಲ ನೀಡಲು ಜಿಲ್ಲೆಯ 164 ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಿಗೆ ವಿತರಣೆ ಮಾಡುತ್ತದೆ. ಈ ಹಣ ಪಡೆದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು ರೈತರ ಕೃಷಿ ಕ್ಷೇತ್ರದ ವಿಸ್ತೀರ್ಣ ಆಧರಿಸಿ ಬೆಳೆ ಸಾಲ ವಿತರಣೆ ಮಾಡುತ್ತದೆ.

ಅಡಕೆ ಬೆಳೆಗೆ ಪ್ರತಿ ಎಕರೆಗೆ 1.20 ಲಕ್ಷ ರೂ. ಬೆಳೆ ಸಾಲ ವಿತರಿಸಲಾಗುತ್ತದೆ. ಈಗಾಗಲೇ ಪ್ರತಿ ರೈತನಿಗೆ ಗರಿಷ್ಠ 3 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ನೀಡಲಾಗಿದೆ. ಬೆಳೆ ಸಾಲ ಮರುಪಾವತಿಗೆ ಎಲ್ಲೆಡೆ ಮಾರ್ಚ್ ಅಂತಿಮ ಅವಧಿ. ಅಡಕೆ ಬೆಳೆಗಾರರಿಗೆ ಮೇ ಅಂತ್ಯದವರೆಗೆ ಅವಕಾಶವಿದೆ. ಮಾರ್ಚ್​ನಲ್ಲಿ ರೈತರು ಅಡಕೆ ಸಂಸ್ಕರಿಸಿ ಮಾರಾಟ ಮಾಡದ ಕಾರಣ ಜಿಲ್ಲೆಯಲ್ಲಿ ಮಾತ್ರ ಮೇ ಅಂತ್ಯದವರೆಗೆ ಅವಕಾಶ ನೀಡಲಾಗಿದೆ. ಆದರೆ, ಬೆಳೆ ಸಾಲ ವಾಪಸಾತಿ ಹೇಗೆ ಎಂಬ ಕೊರಗು ರೈತರನ್ನು ಕಾಡುತ್ತಿದೆ.

ಸಹಕಾರಿ ಸಂಘಗಳಲ್ಲಿ ಪಡೆದ ಬೆಳೆ ಸಾಲದಲ್ಲಿ ಅರ್ಧದಷ್ಟು ಹಣ ಈಗಾಗಲೇ ಖರ್ಚಾಗಿದೆ. ಅಡಕೆ ಗೊನೆಗಳಿಗೆ ಬೋರ್ಡೆ ಸಿಂಪಡಣೆ ಮಾಡಿದ್ದರೂ ಕೊಳೆ ರೋಗ ಹತೋಟಿಗೆ ಬಂದಿಲ್ಲ. ಹೀಗಾಗಿ, ಮತ್ತೆ ಮತ್ತೆ ಬೋಡೋ ಸಿಂಪಡಿಸಿ ರೈತರು ಅಧಿಕ ಹಣ ಕಳೆದುಕೊಂಡಿದ್ದಾರೆ. ಇನ್ನೊಂದೆಡೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಬರಲಿ ಎಂದು ಹಲವು ರೈತರು ಅಡಕೆ ಮರಗಳ ಎಲೆಗಳಿಗೂ ಬೋರ್ಡೆ ಸಿಂಪಡಣೆ ಮಾಡಿದ್ದಾರೆ. ಇಷ್ಟೆಲ್ಲ ಆದರೂ ಕೊಳೆ ರೋಗ ನಿಯಂತ್ರಣಕ್ಕೆ ಬಂದಿಲ್ಲ.

ಅಡಕೆ ವಾರ್ಷಿಕವಾಗಿ ಒಮ್ಮೆ ಬರುವ ಬೆಳೆ. ಈ ವರ್ಷದ ಬೆಳೆ ಅರ್ಧದಷ್ಟು ಈಗಾಗಲೇ ಹಾನಿಯಾಗಿದೆ. ಬೆಳೆ ಸಾಲದ ಮರುಪಾವತಿ ಕಷ್ಟ ಎಂಬುದನ್ನು ಸಹಕಾರಿ ಸಂಘಗಳು ಅರಿತಿವೆ. ತಾಲೂಕಿನ ಕೆಲ ಸಹಕಾರಿ ಸಂಘಗಳು ಕಂದಾಯ ಸಚಿವರಿಗೆ ಪತ್ರ ಬರೆಯಬೇಕು. ಸಾಲ ಮರುಪಾವತಿಗೆ ಹೆಚ್ಚಿನ ಕಂತು ನೀಡಬೇಕು ಎಂಬುದು ರೈತರು ಒತ್ತಾಯವಾಗಿದೆ.

ಜೋಳ ಬೆಳೆದವರ ಗೋಳು: ಕಳೆದ ವರ್ಷ ಮಳೆ ಕಡಿಮೆ ಇದ್ದ ಕಾರಣ ತಾಲೂಕಿನಲ್ಲಿ ಗೋವಿನ ಜೋಳ ಉತ್ತಮ ಇಳುವರಿ ಬಂದಿತ್ತು. ಈ ವರ್ಷವೂ ಮಳೆ ಕಡಿಮೆ ಆಗಲಿದೆ ಎಂಬ ಹಿನ್ನೆಲೆಯಲ್ಲಿ ತಾಲೂಕಿನ ಬನವಾಸಿ ಮತ್ತು ದಾಸನಕೊಪ್ಪ ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಜೋಳ ಬೆಳೆದಿದ್ದಾರೆ. ಆದರೆ, ಮಳೆ ಹೆಚ್ಚಾದ ಕಾರಣ ಜೋಳದ ಗಿಡಗಳೆಲ್ಲ ಕೊಳೆತು ಹಾನಿಯಾಗಿದೆ.

ಸಹಕಾರಿ ಸಂಘದ ವ್ಯಾಪ್ತಿಯ 12 ಗ್ರಾಮಗಳಲ್ಲಿ ಶೇ. 70ರಷ್ಟು ಅಡಕೆ ಬೆಳೆ ಕೊಳೆ ರೋಗದಿಂದ ಹಾನಿಯಾಗಿದೆ. ರೈತರು ಪಡೆದ ಸಾಲ ಮರುಪಾವತಿಸುವ ಸ್ಥಿತಿಯಲ್ಲಿಲ್ಲ. ಕಂತು ವಿಸ್ತರಿಸಿ, ಆರ್ಥಿಕ ಸಹಾಯ ಒದಗಿಸುವಂತೆ ಕಂದಾಯ ಸಚಿವರಿಗೆ ಶಾಸಕ ಭೀಮಣ್ಣ ನಾಯ್ಕ ಮೂಲಕ ಮನವಿ ಸಲ್ಲಿಸಿದ್ದೇವೆ.
ಗುರುಪಾದ ಹೆಗಡೆ ಬೊಮ್ನಳ್ಳಿ ಅಧ್ಯಕ್ಷ ಹಾರೂಗಾರ ಸೇವಾ ಸಹಕಾರಿ ಸಂಘ

ಈ ವರ್ಷದ ಅತಿವೃಷ್ಟಿಯಿಂದಾಗಿ ಮೆಕ್ಕೆ ಜೋಳ ನಾಶವಾಗಿದೆ. ಬನವಾಸಿ, ದಾಸನಕೊಪ್ಪ ಭಾಗದ ಸುಮಾರು 300 ಎಕರೆ ಪ್ರದೇಶದಲ್ಲಿನ ಮೆಕ್ಕೆ ಜೋಳವನ್ನು ರೈತರು ಕಿತ್ತೊಗೆದಿದ್ದಾರೆ.
ಯುವರಾಜ ಗೌಡ ಸಂತೊಳ್ಳಿ ರೈತ

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…