16 C
Bangalore
Thursday, December 12, 2019

ಹಸಿ ಅಡಕೆ ಟೆಂಡರ್ ಜೋರು

Latest News

ವಿಕ್ಟೋರಿಯಾದಲ್ಲಿ 68 ಕೋಟಿ ರೂ ವೆಚ್ಚದ ಕಟ್ಟಡ

ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್​ಐ) ಆಸ್ಪತ್ರೆಗಳಲ್ಲಿ ಒಳರೋಗಿಗಳ ಸೇವೆಗಾಗಿ 68.50 ಕೋಟಿ ರೂ. ವೆಚ್ಚದಲ್ಲಿ ಸಾವಿರ ಒಳರೋಗಿಗಳ ದಾಖಲು...

ಪೊಲೀಸರ ಹಸ್ತಕ್ಷೇಪಕ್ಕೆ ಕೋರ್ಟ್ ಕಿಡಿ

ಬೆಂಗಳೂರು: ಸ್ಥಿರಾಸ್ತಿ ವ್ಯಾಜ್ಯವೊಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಖುದ್ದು ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿ ವಕೀಲರೊಬ್ಬರಿಗೆ ನೋಟಿಸ್ ನೀಡಿದ ಪ್ರಕರಣದಲ್ಲಿ ವಿಜಯನಗರ ಠಾಣೆ ಇನ್​ಸ್ಪೆಕ್ಟರ್...

ಗಣಿತಶಾಸ್ತ್ರಜ್ಞ, ತಂತ್ರಜ್ಞಾನ ನಿಪುಣ, ಇತಿಹಾಸ ಸಂಶೋಧಕ

ಎರಡು ಶತಮಾನಗಳ ಕಾಲ ಭಾರತದಲ್ಲಿ ಆಧಿಕಾರಿಕವಾಗಿ ತಳವೂರಿದ್ದ ಬ್ರಿಟಿಷರು ಭೌಗೋಳಿಕವಾಗಿ ಅಲ್ಲದೆ ಬೌದ್ಧಿಕವಾಗಿ- ಮಾನಸಿಕವಾಗಿಯೂ ಭಾರತೀಯರನ್ನು ದಾಸ್ಯಕ್ಕೊಳಪಡಿಸಲು ಪ್ರಯತ್ನಿಸಿದರು; ತಮ್ಮ ಇತಿಹಾಸ-ಸಂಸ್ಕೃತಿಗಳನ್ನು ಕುರಿತು ಭಾರತೀಯರಲ್ಲಿ ಕೀಳರಿಮೆ...

ಡಿಸೆಂಬರ್ 14 ರಂದು ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ಡಾ. ಡಿ.ಎಸ್. ರ್ಕ ಸಾಹಿತ್ಯ ವೇದಿಕೆಯಿಂದ ಜಗದೀಶ ಶೆಟ್ಟರ್ ದತ್ತಿ ಆಶ್ರಯದಲ್ಲಿ ಕೊಡಮಾಡುವ ಪ್ರಸಕ್ತ ಸಾಲಿನ ಡಾ. ಡಿ.ಎಸ್. ರ್ಕ ಕಾವ್ಯ ಪ್ರಶಸ್ತಿಯು...

ಅನ್ನಭಾಗ್ಯ ಅಕ್ಕಿ ಪ್ರಮಾಣ ಇಳಿಕೆ? 408 ಕೋಟಿ ರೂ ಉಳಿತಾಯ 

| ಬೇಲೂರು ಹರೀಶ ಬೆಂಗಳೂರು ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ತಿಂಗಳು ಬಿಪಿಎಲ್ ಕಾರ್ಡ್​ದಾರರಿಗೆ ವಿತರಿಸುವ 7 ಕೆಜಿ ಅಕ್ಕಿ ಪ್ರಮಾಣವನ್ನು 5 ಕೆಜಿಗೆ ಇಳಿಸಿ,...

ಶಿರಸಿ: ನಗರದ ಕದಂಬ ಮಾರ್ಕೆಟಿಂಗ್ ಸಂಸ್ಥೆಯು ಹಸಿ ಅಡಕೆ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದು, ರೈತರು ನಿರೀಕ್ಷೆಗೂ ಮೀರಿ ಫಸಲು ತರುತ್ತಿದ್ದಾರೆ. ಮಂಗಳವಾರ ಒಂದೇ ದಿನ 750 ಕ್ವಿಂಟಾಲ್ ಹಸಿ ಅಡಕೆ ಮಾರಾಟವಾಗಿದೆ.
ಮಲೆನಾಡಿನಲ್ಲಿ ಜನರಿಲ್ಲ. ಇದ್ದ ಜನರು ಕೃಷಿ ಕೆಲಸದತ್ತ ಆಸಕ್ತಿ ತೋರುತ್ತಿಲ್ಲ. ಅನೇಕ ಹಳ್ಳಿಗಳಲ್ಲಿ ಹಿರಿಯರು ಮಾತ್ರ ಮನೆಗಳಲ್ಲಿದ್ದಾರೆ. ಅಡಕೆ ಕೊಯ್ಲಿನ ನಿರ್ವಹಣೆ ಹಿರಿತಲೆಗಳಿಂದ ಕಷ್ಟವಾಗುತ್ತಿದೆ. ರೈತನಿಗೆ ನೆರವಾಗುವ ಕಾರಣಕ್ಕೆ ನಗರದ ಕದಂಬ ಮಾರ್ಕೆಟಿಂಗ್ 2011ರಿಂದ ಹಸಿ ಅಡಕೆ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಫಸಲು ಗುತ್ತಿಗೆ ನೀಡಲು ಮನಸ್ಸಿಲ್ಲದ ಮತ್ತು ತಾವೇ ಸಂಸ್ಕರಿಸಲು ಸಾಧ್ಯವಾಗದ ರೈತರು ಅಡಕೆ ಕೊಯ್ಲು ಮಾಡಿ ಟೆಂಡರ್​ಗೆ ತಂದಿದ್ದರು. ಆ ವರ್ಷ 2,500 ಕ್ವಿಂಟಾಲ್ ಹಸಿ ಅಡಕೆ ಟೆಂಡರ್​ನಲ್ಲಿ ಮಾರಾಟವಾಗಿದೆ. ವರ್ಷದಿಂದ ವರ್ಷಕ್ಕೆ ಹಸಿ ಅಡಕೆ ತರುವ ರೈತರ ಪ್ರಮಾಣ ಅಧಿಕವಾಗಿದೆ. ಕಳೆದ ವರ್ಷ ಒಟ್ಟು 6,174 ಕ್ವಿಂಟಾಲ್​ಗಳಷ್ಟು ಹಸಿ ಅಡಕೆ ಟೆಂಡರ್ ಮೂಲಕ ಮಾರಾಟವಾಗಿದೆ. ಈ ವರ್ಷ ನ. 13ರಿಂದ ಪ್ರಕ್ರಿಯೆ ಆರಂಭಗೊಂಡಿದ್ದು, ಇಲ್ಲಿಯವರೆಗೆ 4,800 ಕ್ವಿಂಟಾಲ್ ಹಸಿ ಅಡಕೆ ಮಾರಾಟವಾಗಿದೆ. 10 ಸಾವಿರ ಕ್ವಿಂಟಾಲ್ ಹಸಿ ಅಡಕೆ ಈ ವರ್ಷ ವಹಿವಾಟಾಗಬಹುದು ಎಂದು ಅಂದಾಜಿಸಲಾಗಿದೆ.
ದರ ಎಷ್ಟು?: ಅಡಕೆಗೆ ದರ ಕಡಿಮೆ ಇರುವ ಕಾರಣ ಹಸಿ ಅಡಕೆಗೆ ಈ ವರ್ಷ ಬೇಡಿಕೆ ಕುಸಿಯಬಹುದು ಎಂದು ಅಂದಾಜಿಸಲಾಗಿತ್ತು. ಸೊರಬ, ದಾವಣಗೆರೆ ಮತ್ತು ಸ್ಥಳೀಯರು ಸೇರಿ 55ಕ್ಕೂ ಅಧಿಕ ವರ್ತಕರು ಹಸಿ ಅಡಕೆ ಖರೀದಿಗೆ ಮುಂದಾಗಿದ್ದಾರೆ. ಕಾಯಿ ಅಡಕೆಗೆ ಪ್ರತಿ ಕ್ವಿಂಟಾಲ್​ಗೆ 3,600 ರೂ. ದಿಂದ 3,850 ರೂ., ಗೋಟು ಅಡಕೆ 4,100 ರೂ. ವರೆಗೆ ದರ ಬರುತ್ತಿದೆ. ಒಂದು ಕ್ವಿಂಟಾಲ್ ಕಾಯಿ ಅಡಕೆಯನ್ನು ಸುಲಿದು ಸಂಸ್ಕರಿಸಿದರೆ 15 ಕೆ.ಜಿ. ರಾಶಿ ಅಡಕೆ ಸಿದ್ಧವಾಗುವುದು. ಅದೇ ರೀತಿ 1 ಕ್ವಿಂಟಾಲ್ ಗೋಟಡಕೆ ಸಂಸ್ಕರಿಸಿದರೆ 21 ಕೆ.ಜಿ. ಚಾಲಿ ಸಿದ್ಧಗೊಳ್ಳುತ್ತದೆ.
ತಾಲೂಕಿನಲ್ಲಿ ಈಗ ಅಡಕೆ ಸಂಸ್ಕರಿಸುವ ಕಾರ್ವಿುಕರ ಕೊರತೆ ಇದೆ. ಸುಲಿಯುವವರಿಗೆ 1 ಸಾವಿರ ಅಡಕೆಗಳಿಗೆ 40ರಿಂದ 50 ರೂ. ನೀಡಬೇಕು. ಪ್ರತಿ ವ್ಯಕ್ತಿ ದಿನಕ್ಕೆ ಸರಾಸರಿ 3 ಸಾವಿರ ಅಡಕೆಯನ್ನು ಮಾತ್ರ ಸುಲಿಯಲು ಸಾಧ್ಯವಾಗುತ್ತದೆ. ಕಾಯಿ ಅಡಕೆಯನ್ನು ಕೊಯ್ಲು ಮಾಡಿದ ಮೂರು ದಿನಗಳ ಒಳಗೆ ಸುಲಿದು ಸಂಸ್ಕರಿಸಬೇಕಾಗುತ್ತದೆ. ಆದರೆ, ಕಾರ್ವಿುಕರ ಕೊರತೆಯಿಂದಾಗಿ ಸುಲಿಯಲು ಸಾಧ್ಯವಾಗದೇ ರೈತರು ಹಸಿ ಅಡಕೆಯನ್ನೇ ಮಾರುಕಟ್ಟೆಗೆ ಒಯ್ಯಲು ಆಸಕ್ತಿ ತೋರುತ್ತಿದ್ದಾರೆ.

ರೈತರಿಗೆ ಯೋಗ್ಯ ದರ ಸಿಕ್ಕಿಲ್ಲ ಅನಿಸಿದರೆ ಟೆಂಡರ್ ರದ್ದುಪಡಿಸಿ ತಮ್ಮ ಅಡಕೆ ವಾಪಸ್ ಒಯ್ಯಲು ಅವಕಾಶವಿದೆ. ಆದರೆ, ಇದುವರೆಗೂ ಅಂತಹ ಒಂದೂ ಪ್ರಕರಣ ನಡೆದಿಲ್ಲ. ಇಲ್ಲಿ ಅಡಕೆ ಮಾರಾಟ ಮಾಡಿದ ರೈತರು ಸಂತೃಪ್ತಿಯಿಂದ ನಡೆದಿದ್ದಾರೆ.
| ವಿಶ್ವೇಶ್ವರ ಭಟ್ ವ್ಯವಸ್ಥಾಪಕ ನಿರ್ದೇಶಕ, ಕದಂಬ ಸಂಸ್ಥೆ

ಮಕ್ಕಳೆಲ್ಲ ಬೆಂಗಳೂರಿನಲ್ಲಿದ್ದು, ಅಡಕೆ ಇಳಿಸುವ ಕಾರ್ಯಕ್ಕೆ ಅವರಿಗೆ ಬರಲಾಗುತ್ತಿಲ್ಲ. ಇಲ್ಲಿ ಕೆಲಸಗಾರರು ಸಿಗದೆ ಅಡಕೆ ಸಂಸ್ಕರಿಸಲಾಗುತ್ತಿಲ್ಲ. ಹಸಿ ಅಡಕೆಯನ್ನು ಟೆಂಡರ್ ಮೂಲಕ ಮಾರಾಟ ಮಾಡುವುದು ನಮಗೆ ಅನಿವಾರ್ಯ.
| ಗಣೇಶ ಹೆಗಡೆ ರೈತ

Stay connected

278,741FansLike
587FollowersFollow
624,000SubscribersSubscribe

ವಿಡಿಯೋ ನ್ಯೂಸ್

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...