ರೈತ ಮಹಿಳೆ ಆತ್ಮಹತ್ಯೆಗೆ ಶರಣು

ಸಿರವಾರ: ತಾಲೂಕಿನ ತುಪ್ಪದೂರು ಗ್ರಾಮದ ರೈತ ಮಹಿಳೆ ವೀರಭದ್ರಮ್ಮ (34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೀರಭದ್ರಮ್ಮ ಮೃತೆ. ತವರು ಮನೆ ಬೇವಿನೂರು ಗ್ರಾಮದಲ್ಲಿ ಶನಿವಾರ ವಿಷ ಸೇವಿಸಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದಾರೆ. ಹರವಿ ಗ್ರಾಮದ ಯೂನಿಯನ್ ಬ್ಯಾಂಕ್‌ನಲ್ಲಿ 2 ಲಕ್ಷ ರೂ., ಮಾನ್ವಿ ಪಟ್ಟಣ ಸಹಕಾರಿ ಬ್ಯಾಂಕ್‌ನಲ್ಲಿ 25 ಸಾವಿರ ರೂ. ಸಾಲ ಮತ್ತು ಹೊರಗಡೆ ಕೈ ಸಾಲ ಮಾಡಿದ್ದರು ಎನ್ನಲಾಗಿದೆ. ಈ ಕುರಿತು ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.