ನಾಯಕತ್ವದ ಗುಣ ಮೈಗೂಡಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ವೃಷಭೇಂದ್ರಪ್ಪ ಕಿವಿಮಾತು

ಸಿರಿಗೆರೆ: ಶಿಸ್ತು, ಸಂಯಮ, ಸಹಬಾಳ್ವೆ, ನಾಯಕತ್ವದ ಗುಣ ಬೆಳಸಲು ಶಿಬಿರ ಪರಿಣಾಮಕಾರಿ ಆಗಿದೆ ಎಂದು ದಾವಣಗೆರೆ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ವೈ.ವೃಷಭೇಂದ್ರಪ್ಪ ತಿಳಿಸಿದರು.

ಸಮೀಪದ ಶಾಂತಿವನದಲ್ಲಿ ದಾವಣಗೆರೆ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ಪೌರ ಶಿಕ್ಷಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀವನ ಮೌಲ್ಯ, ಆದರ್ಶಗಳ ಜತೆಗೆ ಶ್ರಮದ ಮಹತ್ವ ಅರಿಯುವುದು ಅಗತ್ಯ. ಶಿಬಿರದ ಪ್ರತಿಯೊಂದು ಚಟುವಟಿಕೆಯಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಳ್ಳಬೇಕು ಎಂದರು.

ಎಂ.ಬಸವಯ್ಯ ವಸತಿ ಪಿಯು ಕಾಲೇಜಿನ ಪ್ರಾಚಾರ್ಯ ಡಿ.ಎಂ.ನಾಗರಾಜ್ ಮಾತನಾಡಿ, ಶಿಬಿರಾರ್ಥಿಗಳಿಗೆ ಜೀವನಶೈಲಿ ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳಲು ತರಬೇತಿ ದೊರೆಯುತ್ತದೆ ಎಂದು ತಿಳಿಸಿದರು.

ಬಿ.ಇಡಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಎನ್.ನಂದಿನಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಎಂ.ಎಂ.ಕಾಲೇಜಿನ ಸಲಹಾ ಸಮಿತಿ ಅಧ್ಯಕ್ಷ ಬಿ.ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಕೆ.ಟಿ.ನಾಗರಾಜ ನಾಯ್ಕ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಪ್ರಾಧ್ಯಾಪಕಿ ಜಿ.ಎಂ.ಶಶಿಕಲಾ ಸ್ವಾಗತಿಸಿದರು. ಟಿ.ಹಾಲೇಶಪ್ಪ ವಂದಿಸಿದರು.

Leave a Reply

Your email address will not be published. Required fields are marked *