ಕುಡುಗೋಲಿನಿಂದ ಕೊಚ್ಚಿ ವ್ಯಕ್ತಿ ಕೊಲೆ

ಸಿರಗುಪ್ಪ:ನಗರದಲ್ಲಿ ಕುಡುಗೋಲಿನಿಂದ ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ನಗರದ ಡ್ರೈವರ್ ಕಾಲನಿಯ ಲೇಔಟ್‌ನಲ್ಲಿ ವಾಚ್‌ಮ್‌ನ್ ಆಗಿ ಕೆಲಸ ಮಾಡುತ್ತಿದ್ದ ಬಂಡಿರಂಗಪ್ಪ (60) ಮೃತ. ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಶಂಕಿಸಿ ಆಕೆಯ ಮಗ ಕಾಳಿಂಗಪ್ಪ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಆರೋಪಿ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ಶೀಘ್ರ ಬಂಧಿಸಲಾಗುವುದು ಎಂದು ಸಿಪಿಐ ಮೌನೇಶ್ವರ ಮಾಲೀಪಾಟೀಲ್ ತಿಳಿಸಿದ್ದಾರೆ.