ಉರುಳಾದ ಜೋಕಾಲಿ, ಪ್ರಾಣ ಕಳೆದುಕೊಂಡ ಬಾಲಕಿ

ಸಿರಗುಪ್ಪ (ಬಳ್ಳಾರಿ): ಜೋಕಾಲಿಯಲ್ಲಿ ಆಡಲು ಹೋದ ಬಾಲಕಿಗೆ ಸೀರೆ ಉರುಳಾಗಿ ಗುರುವಾರ ಸಂಜೆ ಸಾವಿಗೀಡಾಗಿದ್ದಾಳೆ. ನಗರದ 14ನೇ ವಾರ್ಡ್‌ನ ಪರ್ವಿನ್ ಬೇಗಂ (13) ಮೃತ ಬಾಲಕಿ. ಚಾಂದ್‌ಬಾಷಾ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾಳೆ. ನಗರದ ಶಾಂತಿನಿಕೇತನ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದಳು. ವಿದ್ಯಾರ್ಥಿನಿ ಆತ್ಮಕ್ಕೆ ಮೌನಾಚರಣೆ ನಡೆಸಿ, ಶಾಲೆಗೆ ರಜೆ ಘೋಷಿಸಲಾಗಿದೆ.