ವಿದ್ಯಾಭ್ಯಾಸ ಮೊಟಕುಗೊಳಿಸದಿರಿ

ಹೈಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜು ಸಲಹೆ

ಸಿರಗುಪ್ಪ (ಬಳ್ಳಾರಿ): ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅನೇಕ ಅವಕಾಶಗಳಿವೆ. ಎಂಥ ಸಂದರ್ಭದಲ್ಲೂ ಅಭ್ಯಾಸ ಮೊಟಕುಗೊಳಿಸದೆ ಮುಂದುವರಿಸಬೇಕು ಎಂದು ಹೈಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜು ಹೇಳಿದರು.

ನಗರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಜಿಲ್ಲಾ ಲೆಕ್ಕ ಪರಿಶೋಧಕರ ಸಂಘದಿಂದ ತಾಲೂಕಿನ ವಿವಿಧ ಕಾಲೇಜುಗಳ ಬಿಕಾಂ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ಲೆಕ್ಕ ಪರಿಶೋಧನೆ ವಿಷಯ ಆಯ್ಕೆ ಕುರಿತು ಸಾಧಕ ಬಾಧಕಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಿಕಾಂ ಪದವಿ ಪಡೆದರೆ ಉದ್ಯೋಗ ಅವಕಾಶ ಇಲ್ಲ ಎಂಬ ತಪ್ಪು ಕಲ್ಪನೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೈಬಿಡಬೇಕು. ಲೆಕ್ಕ ಪರಿಶೋಧನಾ ವಿಷಯವನ್ನು ಆಯ್ಕೆ ಮಾಡಿಕೊಂಡಲ್ಲಿ ಸಾಕಷ್ಟು ಅವಕಾಶಗಳಿವೆ. ಬಿಕಾಂ ವಿದ್ಯಾರ್ಥಿಗಳು ಲೆಕ್ಕ ಪರಿಶೋಧನಾ ವಿಷಯ ಆಯ್ಕೆಮಾಡಿಕೊಂಡರೆ ಸಂಘದಿಂದ ನೈತಿಕ ಸ್ಥೆರ್ಯದೊಂದಿಗೆ ಆರ್ಥಿಕ ಸಹಾಯ ಮಾಡಲಾಗುವುದು ಎಂದು ಹೇಳಿದರು.

ಹಿರಿಯ ಲೆಕ್ಕ ಪರಿಶೋಧಕ ಕೆ.ನಾಗನಗೌಡ ಮಾತನಾಡಿದರು. ಜಿಲ್ಲಾ ಲೆಕ್ಕ ಪರಿಶೋಧಕ ಎ.ಸಿದ್ದರಾಮೇಶ್ವರಗೌಡ, ರಾಜಶೇಖರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ತಾಲೂಕು ಲೆಕ್ಕ ಪರಿಶೋಧಕರಾದ ಹಚ್ಚೊಳ್ಳಿ ವಿನಯ್‌ಕುಮಾರ್, ಶರಣಬಸವ, ಸುರಭಿ, ನಿವೃತ್ತ ಉಪನ್ಯಾಸಕ ಶಿವಕುಮಾರ್‌ಬಳಿಗಾರ್, ಪ್ರಾಚಾರ್ಯರಾದ ಬಸವರಾಜ, ಅಯ್ಯನಗೌಡ, ಹರೀಶ, ಬಸವಬಳಗ ಟ್ರಸ್ಟನ ಅಧ್ಯಕ್ಷ ಶಿವಪ್ರಕಾಶ ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *