ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ಸಿರಗುಪ್ಪ: ಸಾಲಬಾಧೆ ತಾಳದೆ ಬೊಮ್ಮಲಾಪುರ ರೈತ ವಿಷ ಸೇವಿಸಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಜಮಿನ್(62)ಮೃತ.

ಬೆಂಜಮಿನ್ ಅವರಿಗೆ ಎರಡು ಎಕರೆ ಜಮೀನಿದೆ. ಇಟಗಿಹಾಳ್‌ದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2.90 ಲಕ್ಷ ರೂ., ಖಾಸಗಿಯಾಗಿ 2- 3 ಲಕ್ಷ ರೂ. ಸಾಲ ಪಡೆದಿದ್ದರು. ಮೃತಗೆ ಮೂವರು ಪುತ್ರರು, ಪುತ್ರಿ ಇದ್ದಾರೆ. ಸ್ಥಳಕ್ಕೆ ಸಿಪಿಐ ಮೌನೇಶ್ವರ ಮಾಪಾ, ಪಿಎಸ್‌ಐ ಎನ್.ರಘು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಹಚ್ಚೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.