ಸಾಲಬಾಧೆಗೆ ರೈತ ಆತ್ಮಹತ್ಯೆ

ಸಿರಗುಪ್ಪ (ಬಳ್ಳಾರಿ): ತಾಲೂಕಿನ ಬಿ.ಜಿ.ದಿನ್ನಿ ಗ್ರಾಮದ ರೈತ ಸಾಲಬಾಧೆ ತಾಳಲಾರದೆ ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಿ.ಮಹಾದೇವಗೌಡ (50) ಮೃತ. ವಿಷ ಸೇವಿಸಿ ಅಸ್ವಸ್ಥರಾಗಿದ್ದ ಮಹಾದೇವ ಗೌಡರನ್ನು ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮಹಾದೇವಗೌಡ ಹಚ್ಚೊಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 65 ಸಾವಿರ ರೂ., ಖಾಸಗಿಯಾಗಿ 5 ಲಕ್ಷ ರೂ.ಸಾಲ ಪಡೆದಿದ್ದರು. 5 ಎಕರೆ ಸ್ವಂತ ಭೂಮಿಯಲ್ಲಿ ಹತ್ತಿ, ಕಡಲೆ, ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಮಳೆ ಕೊರತೆಯಿಂದ ಬೆಳೆ ಕೈಕೊಟ್ಟ ಪರಿಣಾಮ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ರತ್ನಮ್ಮ ಹಚ್ಚೊಳ್ಳಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಮೃತರಿಗೆ ಪುತ್ರಿ ಇದ್ದಾರೆ.

ಶಾಸಕರು ಭೇಟಿ
ಶಾಸಕ ಎಂ.ಎಸ್.ಸೋಮಲಿಂಗಪ್ಪ ಭೇಟಿ ನೀಡಿ ರೈತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಹಾಯಕ ಕೃಷಿ ನಿರ್ದೇಶಕ ಪಾಲಾಕ್ಷಿ ಗೌಡ ಇತರರಿದ್ದರು.