More

  ವಿಶ್ವಕರ್ಮ ಸಮುದಾಯ ಭವನಕ್ಕೆ ಜಾಗ ನೀಡಿ

  ಸಿರಿಗೇರಿ: ಗ್ರಾಪಂ ವ್ಯಾಪ್ತಿಯಲ್ಲಿ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ಸೂಕ್ತ ಸ್ಥಳ ನೀಡುವಂತೆ ಕೋರಿ ಸಮುದಾಯದವರು ಪಿಡಿಒ ಉಪ್ಪಾರ ರಾಮಪ್ಪಗೆ ಮನವಿ ಸಲ್ಲಿಸಿದರು.

  ಭಾನುವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಮನವಿ ಸಲ್ಲಿಸಿದ ಸಮುದಾಯದ ಮುಖಂಡರು, ಗ್ರಾಮದಲ್ಲಿ 25ಕ್ಕೂ ಹೆಚ್ಚು ವಿಶ್ವಕರ್ಮ ಸಮುದಾಯದ ಕುಟುಂಬಗಳಿದ್ದು, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದುವರಿಯುತ್ತಿವೆ.

  ನಮಗೆ ಮದುವೆ, ಉಪನಯನ, ದೇವತಾ ಕಾರ್ಯಗಳನ್ನು ಕೈಗೊಳ್ಳಲು ಸಮುದಾಯ ಭವನ ಅಗತ್ಯವಿದ್ದು, ಸೂಕ್ತ ಜಾಗ ನೀಡಿದರೆ ಅನುದಾನ ಸಂಗ್ರಹಿಸಿ ಭವನ ನಿರ್ಮಿಸಿಕೊಳ್ಳುತ್ತೇವೆ. ಶೀಘ್ರವೇ ಜಾಗದ ವ್ಯವಸ್ಥೆ ಮಾಡಬೇಕೆಂದು ಕೋರಿದರು.

  ಮನವಿ ಸ್ವೀಕರಿಸಿದ ಪಿಡಿಒ, ಭವನ ನಿರ್ಮಾಣಕ್ಕೆ ಸೂಕ್ತವಾದ ಸ್ಥಳ ಪರಿಶೀಲಿಸಿ ಪಹಣಿ ಪತ್ರದೊಂದಿಗೆ ಗ್ರಾಪಂ ಸದಸ್ಯರ ಸಭೆಯಲ್ಲಿ ಚರ್ಚಿಸಿ ತಹಸೀಲ್ದಾರ್‌ಗೆ ಪತ್ರ ವ್ಯವಹಾರ ನಡೆಸಲು ಶಿಫಾರಸು ಮಾಡುವುದಾಗಿ ತಿಳಿಸಿದರು.

  ಈ ಸಂದರ್ಭದಲ್ಲಿ ಸಮುದಾಯದ ಅಧ್ಯಕ್ಷ ಎ.ಪಿ. ಜನಾರ್ದನ ಆಚಾರಿ, ಪ್ರಮುಖರಾದ ಅಕ್ಕಸಾಲಿಗ ಚಂದ್ರಪ್ಪ, ಎಪಿ ಜಯಧರ ಆಚಾರಿ, ಬಿ. ಮಂಜಣ್ಣ, ಎಪಿ ಹನುಮೇಶ್, ಬಿ. ಶಂಕ್ರಪ್ಪ ಆಚಾರಿ, ವಕೀಲ ಶೇಖರ್, ವಿ.ಹನುಮೇಶ್, ಗುಡಟ್ಟಿ ಈರಣ್ಣ, ಎನ್.ವಿರೂಪಾಕ್ಷಿ, ಲಕ್ಷ್ಮಣ್ ಭಂಡಾರಿ, ಬಿ. ಮಲ್ಲಿಕಾರ್ಜುನ, ಕೃಷ್ಣಮೂರ್ತಿ, ಸಿದ್ದೇಶ್, ಮೆಡಿಕಲ್ ಚಾಂದ್ ಬಾಷಾ ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts