ಸಿರಿಗೆರೆ ಮಠಕ್ಕೆ ಸಿಇಒ ಭೇಟಿ

ಸಿರಿಗೆರೆ: ತರಳಬಾಳು ಮಠಕ್ಕೆ ಜಿಪಂ ಸಿಇಒ ಸತ್ಯಭಾಮಾ ಭೇಟಿ ನೀಡಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಜತೆ ಬರಗಾಲ ನಿರ್ವಹಣೆ ಕುರಿತು ಚರ್ಚಿಸಿದರು.

ಗ್ರಾಮಸ್ಥರು ಮತ್ತು ಗ್ರಾಪಂ ಅಧ್ಯಕ್ಷರ ಜತೆಗೂಡಿ ಶಾಂತಿವನದ ಸಮೀಪದ ಗೋಶಾಲೆೆ ಹಾಗೂ ಚೆಕ್‌ಡ್ಯಾಮ್ ವೀಕ್ಷಣೆ ಮಾಡಿದರು.

ನಂತರ ಶ್ರೀಗಳ ಜತೆ ಒಂದು ಗಂಟೆ ಕಾಲ ಚರ್ಚೆ ನಡೆಸಿದರು. ಮಠದ ವತಿಯಿಂದ ಗೋಶಾಲೆ, ಚೆಕ್‌ಡ್ಯಾಮ್ ನಿರ್ಮಾಣ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಾಮೀಜಿ ಮಾತನಾಡಿ, ಜಾನುವಾರುಗಳನ್ನು ಗೋಶಾಲೆಗೆ ತರಲು ಮಠದಿಂದ ಲಾರಿ ವ್ಯವಸ್ಥೆ ಮಾಡಲಾಗುವುದು. ಬರ ಪ್ರದೇಶದ ರೈತರು ಇಲ್ಲಿಗೆ ದನಕರುಗಳನ್ನು ತರಬಹುದು ಎಂದರು.

ಮಲ್ಲಶೆಟ್ಟಿಹಳ್ಳಿ, ಸಾಸ್ವೆಹಳ್ಳಿ ಹಾಗೂ ಭರಮಸಾಗರ 42 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಂಬಂಧಿಸಿದಂತೆ ಸಿಇಒ ಅವರಿಗೆ ಶ್ರೀಗಳು ಮಾಹಿತಿ ನೀಡಿದರು.