ಸಿರಿಗೆರೆಯಲ್ಲಿ ಶಾಲೆ ಪ್ರಾರಂಭೋತ್ಸವ

ಸಿರಿಗೆರೆ: ಬೇಸಿಗೆ ರಜೆ ನಂತರ ಬುಧವಾರ ಪುನರಾರಂಭಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಶೈಕ್ಷಣಿಕ ವರ್ಷದ ಮೊದಲ ದಿನ ಹಬ್ಬದ ವಾತಾವರಣ ಕಂಡು ಬಂತು.

ಶಾಲೆ ಆವರಣ, ಕೊಠಡಿಗಳು ಸ್ಚಚ್ಛಗೊಂಡು ವಿದ್ಯಾರ್ಥಿಗಳನ್ನು ಸ್ವಾಗತಿಸಿದವು. ಮಧ್ಯಾಹ್ನ ಸಿಹಿಯೂಟದ ವ್ಯವಸ್ಥೆ ಮಾಡಲಾಗಿತ್ತು. ಶಾಲಾಭಿವೃದ್ಧಿ ಯೋಜನೆ, ತರಗತಿ, ಶಿಕ್ಷಕವಾರು ವೇಳಾಪಟ್ಟಿ ಸಿದ್ಧಪಡಿಸುತ್ತಿದ್ದುದು ಕಂಡು ಬಂತು.

ಜೂನ್ 1ರಿಂದ 31ರವರೆಗೆ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಶಿಕ್ಷಕ ಎಸ್.ಜೆ. ಮಧು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ್ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿದರು. ಶಾಲೆ ಶಿಕ್ಷಕರು ಇತರರಿದ್ದರು.

Leave a Reply

Your email address will not be published. Required fields are marked *