ಸಮಾಜದಲ್ಲಿ ಸರ್ವರೂ ಸಮಾನರು

ಸಿರಿಗೆರೆ: ಸಮಾಜದಲ್ಲಿ ಯಾರು ದೊಡ್ಡವರಲ್ಲ ಎಂದು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನೂತನ ಸಂಸದ ನಾರಾಯಣಸ್ವಾಮಿ ಸಿರಿಗೆರೆ ಬೃಹನ್ಮಠಕ್ಕೆ ಮಠಕ್ಕೆ ಭೇಟಿ ನೀಡಿದ ವೇಳೆ ಆಶೀರ್ವದಿಸಿ ಮಾತನಾಡಿದರು.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಶಾಂತಿಸಾಗರದಿಂದ ಸಿರಿಗೆರೆ ಸುತ್ತಮುತ್ತಲ ಹಳ್ಳಿಗಳಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಿ ಅನುಕೂಲ ಕಲ್ಪಿಸಿದ್ದಾರೆ. ಸಾಸ್ವೆಹಳ್ಳಿ, ಮಲ್ಲಶೆಟ್ಟಿಹಳ್ಳಿ, ಭರಮಸಾಗರ ಕೆರೆಗಳ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಶ್ರಮಿಸಬೇಕು ಎಂದು ನೂತನ ಸಂಸದರಿಗೆ ಸಲಹೆ ನೀಡಿದರು.

ನೂತನ ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಬದ್ಧವಿದೆ ಎಂದು ತಿಳಿಸಿದರು.

ಶಾಸಕ ಎಂ.ಚಂದ್ರಪ್ಪ, ಜಿಪಂ ಸದಸ್ಯ ಡಿ.ವಿ.ಶರಣಪ್ಪ, ತಿಪ್ಪೇಸ್ವಾಮಿ, ಮಹೇಶ್ವರಪ್ಪ, ಲಿಂಗರಾಜ್, ಇಂದ್ರಪ್ಪಗೌಡ, ಕೋಗುಂಡೆ ಮಂಜಣ್ಣ, ಸಿರಿಗೆರೆ ಮೋಹನ್, ಹಳವುದರ ತಿಪ್ಪೇಸ್ವಾಮಿ ಎಸ್.ಬಿ.ರಂಗನಾಥ್ ಹಾಗೂ ಕಾರ್ಯಕರ್ತರಿದ್ದರು.

Leave a Reply

Your email address will not be published. Required fields are marked *