More

  ಭೂಮಾಪಕರ ಸಮಸ್ಯೆ ಪರಿಹರಿಸಿ

  ಸಿರಿಗೆರೆ: ಭೂಮಾಪಕರ ಸಮಸ್ಯೆ ಪರಿಹಾರದ ಕುರಿತು ಸಿರಿಗೆರೆ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ಭಾನುವಾರ ಕಂದಾಯ ಇಲಾಖೆ ಆಯುಕ್ತ ಮನೀಶ್ ಮೌದ್ಗಿಲ್ ಸೇರಿ ವಿವಿಧ ಅಧಿಕಾರಿಗಳ ಜತೆ ಚರ್ಚಿಸಿದರು.

  ಸೇವಾ ಭದ್ರತೆ ಸೇರಿ ವಿವಿಧ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವಂತೆ ನೂರಾರು ಭೂಮಾಪಕರು ಸಿರಿಗೆರೆ ಮಠದಲ್ಲಿ ಈಚೆಗೆ ನಡೆದ ನ್ಯಾಯಪೀಠದಲ್ಲಿ ಶ್ರೀಗಳ ಬಳಿ ಮನವಿ ಮಾಡಿದ್ದರು.

  ಈ ಹಿನ್ನೆಲೆಯಲ್ಲಿ ಉನ್ನತಮಟ್ಟದ ಅಧಿಕಾರಿಗಳ ಜತೆ ತರಳಬಾಳು ಶ್ರೀಗಳು ಎರಡು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.

  ರಾಜ್ಯದಲ್ಲಿ 1800 ಖಾಯಂ ಭೂಮಾಪಕರಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸೇವಾ ಭದ್ರತೆ ಇಲ್ಲ. ಸೇವಾ ಶುಲ್ಕವೂ ಸಮರ್ಪಕವಾಗಿ ವಿತರಣೆಯಾಗಿಲ್ಲ. ದೂರದ ತಾಲೂಕುಗಳಿಗೆ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಇದರ ನಡುವೆ ಮತ್ತೆ 2972 ಪರವಾನಗಿ ಭೂಮಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಿರುವುದರಿಂದ ಸಮಸ್ಯೆ ಹೆಚ್ಚಾಗಲಿದೆ. ಈ ಕುರಿತು ಗಮನ ಹರಿಸುವಂತೆ ಅಧಿಕಾರಿಗಳಿಗೆ ಶ್ರೀಗಳು ತಿಳಿಸಿದರು.

  ಈಗ ಇರುವ ನಿಯಮಗಳಿಂದ ಸರ್ವೇ ಕಾರ್ಯಗಳು ವಿಳಂಬ ಆಗುತ್ತಿರುವ ಕುರಿತು ಚರ್ಚಿಸಲಾಯಿತು. ಈ ಬಗ್ಗೆ ಅಂತಿಮ ರೂಪುರೇಷೆ ತಯಾರಿಸಲು ಚಿತ್ರದುರ್ಗ ಮತ್ತು ಹೊಳಲ್ಕೆರೆ ಸೇರಿ ವಿವಿಧ ತಾಲೂಕಿನ ಅಧಿಕಾರಿಗಳ ಜತೆ ಸಭೆ ನಡೆಸಿ ಅಂತಿಮ ನಿರ್ಣಯಕ್ಕೆ ಬರಲು ಶ್ರೀಗಳು ಸಲಹೆ ನೀಡಿದರು.

  ಯೋಜನಾ ವ್ಯವಸ್ಥಾಪಕ ಸುರೇಶ್ ನಾಯರ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts