ಸಿರಿಗೆರೆ ಗೋಶಾಲೆ ಹರಿದುಬಂತು ಮೇವು

ಸಿರಿಗೆರೆ: ಬರಗಾಲದಲ್ಲಿ ಜಾನುವಾರುಗಳಿಗೆ ಅನುಕೂಲವಾಗಲು ಸಿರಿಗೆರೆಯಲ್ಲಿ ಗೋಶಾಲೆ ಆರಂಭಿಸಲು ಸಹಕರಿಸಿದ್ದೇವೆ ಎಂದು ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸಿರಿಗೆರೆ ಗೋಶಾಲೆಗೆ ಶ್ಯಾಗಲೆ ಗ್ರಾಮಸ್ಥರು ಸೋಮವಾರ ಸಲ್ಲಿಸಿದ 36 ಲೋಡ್ ಮೇವು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಬರಗಾಲದಲ್ಲಿ ಬದುಕುವ ವಿಧಾನ ಮನುಷ್ಯರಿಗೆ ಗೊತ್ತಿರುತ್ತದೆ. ಮೂಕ ಪ್ರಾಣಿಗಳಿಗೆ ತೊಂದರೆಯಾಗಬಾರದು ಎಂಬ ಸದುದ್ದೇಶ ಗೋಶಾಲೆ ಆರಂಭಿಸಿದ್ದೇವೆ ಎಂದರು.

ಅನ್ಯ ಸ್ಥಳಗಳಿಂದ ಬಂದ ರಾಸುಗಳು ಮಾಲೀಕರು ಉಳಿದುಕೊಳ್ಳಲು ವ್ಯವಸ್ಥೆ ಕಾರ್ಯ ನಡೆಯುತ್ತಿದೆ. 300ರಿಂದ 600 ರಾಸುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೆ 140ಕ್ಕಿಂತ ಹೆಚ್ಚು ರಾಸುಗಳು ಗೋಶಾಲೆಯಲ್ಲಿವೆ. ನಿಮ್ಮಲ್ಲಿ ಉತ್ತಮ ಮಳೆ ಬೆಳೆಯಾಗದ ರಾಸುಗಳನ್ನು ವಾಪಾಸು ಕರೆದುಕೊಂಡು ಹೋಗಬಹುದು ಎಂದು ತಿಳಿಸಿದರು.

1986ರಲ್ಲಿ ಶ್ಯಾಗಲೆ ಹಿರಿಯರು ತರಳಬಾಳು ಹುಣ್ಣಿಮೆ ಆಚರಿಸಬಾರದೆಂದು ನಿರ್ಧರಿಸಿ, ಇದೇ ರೀತಿ ಮೇವು ಸಂಗ್ರಹ ಮಾಡಿದ್ದನ್ನು ಶ್ರೀಗಳು ಸ್ಮರಿಸಿದರು. ಭವಿಷ್ಯದಲ್ಲಿ ನೀವೂ ಜಾನುವಾರು ಜಾತ್ರೆ ಮಾಡಬೇಕು ಎಂದು ಸಲಹೆ ನೀಡಿದರು.

ಹಿಂದೆ ಹರಿಹರ ತಾಲೂಕು ನಿಟ್ಟೂರು, ಕುಣಿಬೆಳೆಕೆರೆ, ಕೂಲಂಬಿ ಗ್ರಾಮಗಳಿಂದ 40 ಲೋಡ್ ಮೇವು ನೀಡಿದ್ದಾರೆ. ಇಂದು ಶ್ಯಾಗಲೆ ಗ್ರಾಮಸ್ಥರು 36, ತುರ್ಚಘಟ್ಟ 1, ಗೋಪನಾಳು 1 ಒಟ್ಟು 38 ಲೋಡ್ ಮೇವು ಸಂಗ್ರಹಿಸಿ ಕೊಟ್ಟಿರುವುದು ಸಂತಸ ತಂದಿದೆ ಎಂದರು.

Leave a Reply

Your email address will not be published. Required fields are marked *