ಸ್ವ-ಸಹಾಯ ಸಂಘದಿಂದ ಜೀವನ ಶಿಸ್ತು

ಸಿರಿಗೆರೆ: ಆರ್ಥಿಕ ಸಬಲೀಕರಣಕ್ಕೆ ಸ್ವ-ಸಹಾಯ ಸಂಘಗಳು ಸಹಕಾರಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಎಂ.ದಿನೇಶ್ ಹೇಳಿದರು.

ಗ್ರಾಮದ ಶಿವನಾರದಮುನಿ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವ-ಸಹಾಯ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಂಘ ನಡೆಸುವ ಕಾರ್ಯ ಚಟುವಟಿಕೆಗಳಿಂದ ಜೀವನದಲ್ಲಿ ಶಿಸ್ತು ಬೆಳೆಯುತ್ತದೆ. ಶ್ರದ್ಧಾ ಭಕ್ತಿಯಿಂದ ಕಾಯಕ ಮಾಡಿದಲ್ಲಿ ಉತ್ತಮ ಫಲ ಸಿಗುತ್ತದೆ ಎಂದರು.

ಜಿಲ್ಲಾ ಯೋಜನಾಧಿಕಾರಿ ಕೆ.ಉಮೇಶ್ ಮಾತನಾಡಿ, ಸಂಘಗಳಲ್ಲಿ ಬಡವ, ಶ್ರೀಮಂತ, ಜಾತಿ, ಕುಲ ಎಂಬ ಮನೋಭಾವ ಬರಬಾರದು. ಎಲ್ಲರೂ ಒಂದೇ ಎಂದು ತಿಳಿದು ಭಾಗಿಯಾಗಬೇಕು ಎಂದು ತಿಳಿಸಿದರು.

ಸಮಾಜಕ್ಕೆ ಏನಾದರೂ ಒಂದು ಕೊಡುಗೆ ನೀಡಬೇಕೆಂದು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಭಾಗದಲ್ಲಿ ಸಂಘಗಳನ್ನು ಮಾಡಿದೆ. ವಲಯ ಮಟ್ಟದಲ್ಲಿ 350 ಸಂಘಗಳಿವೆ ಎಂದರು.

ಜನ ಜಾಗೃತಿ ವೇದಿಕೆ ಯೋಜನಾಧಿಕಾರಿ ಮಾಧವ, ಎಂ.ಮರುಳಸಿದ್ದಪ್ಪ, ಸಿರಿಗೆರೆ ವಲಯ ಯೋಜನಾಧಿಕಾರಿ ಸತೀಶ್, ನಮೃತಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *