ವೈನ್‌ಶಾಪ್ ಕಿಟಕಿ ಮುರಿದು ಹಣ, ಮದ್ಯ ದೋಚಿದ ಕಳ್ಳರು

ಸಿರವಾರ: ಪಟ್ಟಣದ ಬಸವ ವೃತ್ತದಲ್ಲಿರುವ ನರ್ತಕಿ ವೈನ್‌ಶಾಪ್‌ನ ಕಿಟಕಿ ಭಾನುವಾರ ಬೆಳಗಿನ ಜಾವ ಮುರಿದು 4 ಸಾವಿರ ರೂ. ನಗದು ಹಾಗೂ 5 ಸಾವಿರ ರೂ. ಮೌಲ್ಯದ ಮದ್ಯ ಕಳವು ಮಾಡಲಾಗಿದೆ. ಸ್ಥಳಕ್ಕೆ ಪಿಎಸ್‌ಐ ಸುಜಾತ ನಾಯಕ ಭೇಟಿ ನೀಡಿ ಪರಿಶೀಲಿದರು. ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಮೂರು ತಿಂಗಳಿನಿಂದ ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ಹೆಚತ್ತ್ತಿದ್ದು, ಜನರಲ್ಲಿ ಭಯದ ವಾತಾವರಣ ಮನೆ ಮಾಡಿದೆ.