
ಸಿರವಾರ: ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನರೇಗಾದಡಿ ಕೈಗೊಂಡಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಬುಧವಾರ ಸ್ತ್ರೀ ಚೇತನ ಅಭಿಯಾನ ಹಾಗೂ ರೋಜಗಾರ್ ದಿನ ಆಚರಿಸಲಾಯಿತು.
ತಾಪಂ ಇಒ ಶಶಿಧರ ಸ್ವಾಮಿ ಮಾತನಾಡಿ, ಏಪ್ರಿಲ್ ಒಂದರಿಂದ ಕೂಲಿ ಮೊತ್ತವು 349 ರಿಂದ 370 ರೂ. ಗೆ ಹೆಚ್ಚಳವಾಗಿದೆ. ಎನ್‌ಎಂಆರ್ ಪ್ರಕಾರ ಕೆಲಸ ಮಾಡಬೇಕು. ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಕೆಲಸದ ಜತೆಗೆ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಬೆಳಗ್ಗೆ ಕೆಲಸಕ್ಕೆ ಬೇಗನೆ ಬರಬೇಕು, ಬರುವಾಗ ಜಾಬ್‌ಕಾರ್ಡ್ ಹಾಗೂ ಕುಡಿವ ನೀರಿನ ಬಾಟಲ್ ತರಬೇಕು. ಕೂಲಿಕಾರರ ಹಾಜರಾತಿಯನ್ನು ಕಡ್ಡಾಯವಾಗಿ ಎನ್‌ಎಂಎಂಎಸ್ ಮೂಲಕವೇ ಮಾಡಬೇಕು. ಕೂಲಿಕಾರರು ಕಡ್ಡಾಯವಾಗಿ ಪಿಎಂಜೆಎಸ್‌ವೈ ಹಾಗೂ ಪಿಎಂಜೆಜೆವೈ ವಿಮೆ ಮಾಡಿಸಿಕೊಳ್ಳಬೇಕು ಎಮದು ತಿಳಿಸಿದರು.