ಶಾಟ್ ಸರ್ಕ್ಯೂಟ್‌ಗೆ ಮನೆಯಲ್ಲಿದ್ದ ವಸ್ತುಗಳು ಭಸ್ಮ

ಸಿರವಾರ: ಪಟ್ಟಣದ ಮಹಾತ್ಮ ಗಾಂಧಿ ಕಾಲನಿಯ ರವಿಕುಮಾರ ಎಂಬವವರ ಮನೆಯಲ್ಲಿ ಬುಧವಾರ ಬೆಳಗ್ಗೆ ಶಾಟ್ ಸರ್ಕ್ಯೂಟ್‌ನಿಂದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಟಿ.ವಿ., ದವಸ ಧಾನ್ಯ, ಬಟ್ಟೆಗಳು ಹಾಗೂ ಇತರೆ ಸಾಮಗ್ರಿ ಸುಟ್ಟಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.