ಸಿರಗುಪ್ಪ: ಪರಿಸರ ಸಮತೋಲನ ಕಾಪಾಡಲು ಹಾಗೂ ಉತ್ತಮ ಮಳೆಗಾಗಿ ಶೇ.33 ಅರಣ್ಯ ಪ್ರದೇಶ ಹೊಂದಿರಬೇಕೆಂದು ಪಪಂ ಪ್ರಭಾರ ಮುಖ್ಯಾಧಿಕಾರಿ ಶೋಭಾ ತಿಳಿಸಿದರು.
ತಾಲೂಕಿನ ತೆಕ್ಕಲಕೋಟೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪಪಂಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು.
ಒಂದು ಮರವನ್ನು ಮೂರು ವರ್ಷ ಸಾಕಿದಾಗ. ಅದು ನಮ್ಮನ್ನು ನೂರು ವರ್ಷ ಸಾಕುತ್ತದೆ. ಕರೊನಾ ಸಮಯದಲ್ಲಿ ಆಕ್ಸಿಜನ್ ಕೊರತೆ ಕಂಡು ಬಂದಿತ್ತು. ಹಾಗಾಗಿ ಗಿಡ ಮರಗಳನ್ನು ಬೆಳೆಸುವುದು ಅಗತ್ಯ. ಆಕ್ಸಿಜನ್‌ಗಾಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡುವುದಕ್ಕಿಂತ, ಹೊಲಗಳ ಬದುವಿನಲ್ಲಿ ನೂರಾರು ಗಿಡಗಳನ್ನು ಬೆಳೆಸಿದರೆ ಪರಿಸರ ಶುದ್ಧಗಾಳಿಯನ್ನು
ಸಿಗಲಿದೆ. ಆದ್ದರಿಂದ ಮರಗಿಡಗಳನ್ನು ಉಳಿಸಿ ಬೆಳೆಸಲು ಮುಂದಾ ಗೋಣ ಎಂದರು.
ಪ್ರಭಾರ ಮುಖ್ಯಶಿಕ್ಷಕ ಹುಲುಗಪ್ಪ, ಶಿಕ್ಷಕರಾದ ರಮೇಶ, ಆಜಾದ್, ಅಮೃತ, ರಾಧಾ, ಜಯಶ್ರೀ, ಸುನೀಲ್ ಜೋಸೆಫ್, ಪಪಂ ಜೆಇ ಸುನಂದಾ, ಆರೋಗ್ಯ ನಿರೀಕ್ಷಕಿ ಅನ್ನಪೂರ್ಣಾ, ಸಿಬ್ಬಂದಿ ಬಾಷಾ, ಸುಬ್ರಮಣ್ಯ ಇತರರಿದ್ದರು.