More

  ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯ

  ಸಿರಗುಪ್ಪ: ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಮ್ ಮೇಲೆ ಪೊಲೀಸರ ಹಲ್ಲೆ ಖಂಡಿಸಿ ಇಲ್ಲಿನ ವಕೀಲರ ಸಂಘ ಮಂಗಳವಾರ ಉಪತಹಸೀಲ್ದಾರ್ ರಾಘವೇಂದ್ರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

  ಸಂಘದ ಅಧ್ಯಕ್ಷ ಮಂಜುನಾಥಗೌಡ ಮಾತನಾಡಿ, ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ವಕೀಲರ ರಕ್ಷಣೆಗಾಗಿ ಗೃಹ-ಕಾನೂನು ಸಚಿವರು ಶೀಘ್ರ ಕ್ರಮ ಕೈಗೊಳ್ಳಬೇಕು. ವಕೀಲರ ಹಿತರಕ್ಷಣಾ ಕಾಯ್ದೆ 2019 ಅನ್ನು ಜಾರಿಗೆ ತರಬೇಕು. ಚಿಕ್ಕಮಗಳೂರು ವಕೀಲರ ಸಂಘದ ಸದಸ್ಯರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು.

  ವಕೀಲ ಮೇಲೆ ಹಲ್ಲೆ ನಡೆಸಿದ ಆರಕ್ಷಕ ಉಪನಿರೀಕ್ಷಕ ಮಹೇಶ್ ಪೂಜೇರಿ,. ಸಹಾಯಕ ಉಪನಿರೀಕ್ಷಕ ರಾಮಪ್ಪ, ಮುಖ್ಯಪೇದೆ ಶಶಿಧರ ಹಾಗೂ ಪೇದೆಗಳಾದ ಗುರುಪ್ರಸಾದ್, ನಿಖಿಲ್ ಮತ್ತು ವಿ.ಟಿ.ಯುವರಾಜ ಎನ್ನುವವರ ವಿರುದ್ಧ ಕಾನೂನು ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

  ಸಂಘದ ಉಪಾಧ್ಯಕ್ಷ ಟಿ.ಎಂ.ರಘುನಂದನ, ಕಾರ್ಯದರ್ಶಿ ಪ್ಯಾಟೇಗೌಡ, ಖಜಾಂಚಿ ರುದ್ರಪ್ಪ, ಹಿರಿಯ ವಕೀಲರಾದ ಈರಣ್ಣ ಪತ್ತಾರ್, ಶಿವರುದ್ರಗೌಡ, ವೀರೇಶ್‌ಗೌಡ, ಅಬ್ದುಲ್‌ಸಾಬ್, ಸಿದ್ದಲಿಂಗಯ್ಯ ಹಿರೇಮಠ, ಕೆ.ಮಂಜುನಾಥ, ಎಸ್.ಶ್ರೀನಿವಾಸ, ಎನ್.ಮಂಜುಳಾ, ಅಶ್ವಿನಿ, ವಿಜಯಲಕ್ಷ್ಮೀ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts