ತದಡಿ ಅಳಿವೆ ಹೂಳಿನಲ್ಲಿ ಬೋಟ್‌ಗಳ ಮುಳುಗಡೆ

ಗೋಕರ್ಣ: ಇಲ್ಲಿನ ತದಡಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್‌ಗಳು ಅಳಿವೆ ಪ್ರದೇಶದಲ್ಲಿರುವ ಭಾರಿ ಹೂಳಿನಿಂದಾಗಿ ಹಾನಿಗೊಳಗಾಗಿ ಮುಳುಗಿದ ಘಟನೆ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.

ಬೆಳಗಿನ ಜಾವ 3 ಗಂಟೆ ವೇಳೆಗೆ ‘ಸದ್ಗುರು’ ಮತ್ತು ‘ಮಂಜುಶ್ರೀ’ ಹೆಸರಿನ ಬೋಟ್‌ಗಳು ಬಂದರಿನಿಂದ ಮೀನುಗಾರಿಕೆಗೆ ಹೊರಟಿದ್ದವು. ಈ ಸಮಯದಲ್ಲಿ ಉಂಟಾದ ಸಮುದ್ರದ ಇಳಿತದಿಂದಾಗಿ ಬೋಟ್‌ಗಳ ತಳಭಾಗ ಅಳಿವೆಯಲ್ಲಿನ ಭಾರಿ ಪ್ರಮಾಣದ ಹೂಳಿನಲ್ಲಿ ಸಿಕ್ಕಿಕೊಂಡು ಹಾನಿಗೊಳಗಾಗಿ ಮುಳುಗಲಾರಂಭಿಸಿದವು. ಈ ಅವಘಡದ ಸುದ್ದಿ ತಿಳಿದು ಸ್ಥಳೀಯ ಮೀನುಗಾರರು, ಕರಾವಳಿ ರಕ್ಷಣಾ ಪೊಲೀಸರು ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿ ಮುಳುಗುತ್ತಿದ್ದ ಬೋಟ್‌ನಲ್ಲಿದ್ದ ಮೀನುಗಾರರ ರಕ್ಷಣೆಗೆ ಮುಂದಾದರು. ಇತರ ಬೋಟ್ ಮೂಲಕ ಮೀನುಗಾರಿಕೆಗೆ ಹೊರಟಿದ್ದ ಬೋಟ್‌ನಲ್ಲಿದ್ದ ಎಲ್ಲ 10 ಮೀನುಗಾರರನ್ನು ಸುರಕ್ಷಿತವಾಗಿ ದಡಕ್ಕೆ ತರಲಾಯಿತು. ಈ ಆಕಸ್ಮಿಕದಲ್ಲಿ ಲಕ್ಷಾಂತರ ರೂ. ಬೆಲೆಯ ಬಲೆ ಸಹಿತ ಎರಡು ಬೋಟ್‌ಗಳು ಸಮುದ್ರದಲ್ಲಿ ಮುಳುಗಿ ಅಪಾರ ಹಾನಿ ಉಂಟಾಗಿದೆ.

ಈ ಬಗ್ಗೆ ಮಾತನಾಡಿದ ತದಡಿ ಮೀನುಗಾರರ ಸಂಘದ ಅಧ್ಯಕ್ಷ ಉಮಾಕಾಂತ ಹೊಸ್ಕಟ್ಟ, ಶುಕ್ರವಾರ ನಡೆದ ಈ ದುರಂತಕ್ಕೆ ಅಳಿವೆ ಭಾಗದಲ್ಲಿ ನಲವತ್ತು ವರ್ಷಗಳಿಗೂ ಹೆಚ್ಚಿನ ಸಮಯದಿಂದ ಮೀನುಗಾರಿಕೆಗೆ ಜೀವಭಯ ಉಂಟುಮಾಡುವ ರೀತಿಯಲ್ಲಿ ತುಂಬಿರುವ ಹೂಳು ಪ್ರಮುಖ ಕಾರಣವಾಗಿದೆ. ಕಳೆದ ಅನೇಕ ವರ್ಷಗಳಿಂದ ತದಡಿ ಮೀನುಗಾರರ ಸಂಘ ಮತ್ತು ಮೀನುಗಾರರ ವತಿಯಿಂದ ಹೂಳನ್ನು ಸ್ವಚ್ಛಗೊಳಿಸಿ ಮೀನುಗಾರಿಕೆ ಬೋಟ್ ಮತ್ತು ಮೀನುಗಾರರ ಸುರಕ್ಷೆತೆಗೆ ಅಗತ್ಯ ಕ್ರಮ ಜರುಗಿಸುವಂತೆ ಮೇಲಿಂದ ಮೇಲೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತ ಬರಲಾಗಿದೆ. ಆದರೆ, ಈವರೆಗೆ ಈ ಬಗ್ಗೆ ಸಂಬಂಧಿಸಿದ ಇಲಾಖೆ ಮತ್ತು ಸರ್ಕಾರ ಗಮನಹರಿಸಿಲ್ಲ. ಈ ಘಟನೆಯಿಂದ ಈಗಾಲಾದರೂ ಸಂಬಂಧಿಸಿದವರು ಜಾಗೃತರಾಗಿ ಹೂಳಿನಿಂದ ಮುಕ್ತಿ ನೀಡಿ ಇಂತಹ ದುರ್ಘಟನೆಗಳಿಂದ ಮೀನುಗಾರರನ್ನು ಬಚಾವ್ ಮಾಡುವಂತೆ ಸಮಸ್ತ ಮೀನುಗಾರರ ಪರವಾಗಿ ವಿನಂತಿಸಿರುವರು.

ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…

ನೀವಿದನ್ನು ನಿತ್ಯವೂ ಚಾಚೂ ತಪ್ಪದೇ ಅನುಸರಿಸಿದರೆ ನೀವು ಖಂಡಿತ ಶ್ರೀಮಂತರಾಗ್ತೀರಿ! Rich Person

ಇಂದು ಪ್ರತಿಯೊಬ್ಬರು ಶ್ರೀಮಂತರಾಗಲು ( Rich Person ) ಬಯಸುತ್ತಾರೆ. ತಾವು ದುಡಿದ ಹಣವನ್ನು ಸರಿಯಾದ…