25.6 C
Bengaluru
Saturday, January 18, 2020

ಏಕೈಕ ಕನ್ನಡತಿ ಲೋಕೋ ಪೈಲಟ್

Latest News

ಪುಣೆ-ಮುಂಬೈ ಎಕ್ಸ್​​ಪ್ರೆಸ್​ ಹೈವೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ನಟಿ ಶಬಾನಾ ಆಜ್ಮಿ ಗಾಯ

ಮುಂಬೈ: ಪುಣೆ ಎಕ್ಸ್​ಪ್ರೆಸ್​ ಹೈವೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಟಿ ಶಬಾನಾ ಆಜ್ಮಿ ಗಾಯಗೊಂಡಿದ್ದಾರೆ.ಅಪಘಾತದಲ್ಲಿ ಗಾಯಗೊಂಡ ಅವರನ್ನು ನವಿ ಮುಂಬಯಿಯ ಖಾಸಗಿ ಆಸ್ಪತ್ರೆಗೆ...

ರೆಡ್ ಕ್ರಾಸ್​ ತತ್ವ ಅಳವಡಿಸಿಕೊಳ್ಳಿ

ಕಲಬುರಗಿ: ವಿದ್ಯಾರ್ಥಿಗಳು ಯುವ ರೆಡ್ಕ್ರಾಸ್ ಮತ್ತು ಕಿರಿಯರ ರೆಡ್ ಕ್ರಾಸ್ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ತತ್ವ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ರೆಡ್ಕ್ರಾಸ್ ಸಂಸ್ಥೆ...

ಜೀವನಶೈಲಿಯೇ ರೋಗಕ್ಕೆ ಕಾರಣ

ವಿಜಯವಾಣಿ ಸುದ್ದಿಜಾಲ ಕಲಬುರಗಿಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಜನರಲ್ಲಿ ಹೊಸ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿವೆ. ಈ ಮೂಲಕ ಸಮಾಜದ ಸ್ವಾಸ್ಥ್ಯ...

ಪಾಕಿಸ್ತಾನಿಗಳು ಭಾರತ ಪ್ರವೇಶಿಸಬಹುದಾದ್ರೆ ಮಹಾರಾಷ್ಟ್ರದವರು ಬೆಳಗಾವಿಗೆ ಭೇಟಿ ನೀಡಬಾರದಾ?: ಸಂಜಯ್​ ರಾವತ್​

ಮುಂಬೈ: ಬೆಳಗಾವಿ ಜಿಲ್ಲೆಗೆ ಭೇಟಿ ನೀಡುವುದನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸಿ ಶಿವಸೇನಾ ಸಂಸದ ಸಂಜಯ್​ ರಾವತ್​ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ವಿರುದ್ಧ...

ಸರ್ಕಾರಿ ನೌಕರರೆಂದು ಪರಿಗಣಿಸಲು ಪಟ್ಟು, ಹಡಗಲಿಯಲ್ಲಿ ತಹಸಿಲ್ ಕಚೇರಿವರೆಗೆ ಸಾರಿಗೆ ಸಿಬ್ಬಂದಿ ಕಾಲ್ನಡಿಗೆ

ಹೂವಿನಹಡಗಲಿ: ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ವಿಲೀನ ಹಾಗೂ ಸಿಬ್ಬಂದಿಗೆ ಸರ್ಕಾರಿ ನೌಕರರ ಎಲ್ಲ ಸೌಲಭ್ಯ ನೀಡುವಂತೆ ಒತ್ತಾಯಿಸಿ ಶನಿವಾರ ಸಾರಿಗೆ ನೌಕರರು...

|ಪ್ರಕಾಶ್ ಮಂಜೇಶ್ವರ ಮಂಗಳೂರು

ಕೈತುಂಬಾ ಸಂಬಳ, ವಿಶೇಷ ಭತ್ಯೆ, ಕುಟುಂಬಕ್ಕೆ ಪೂರ್ಣ ಬೆಂಬಲ ಒದಗಿಸುವ ಖಾತ್ರಿ ಇರುವ ರೈಲ್ವೆ ಇಲಾಖೆಯಲ್ಲಿ ನೌಕರಿ ಪಡೆದಿರುವ ಕನ್ನಡಿಗರು ತೀರಾ ವಿರಳ. ಅದರಲ್ಲೂ ಲೋಕೋ ಪೈಲಟ್ ಹುದ್ದೆ ದೂರದ ಮಾತು. ಇದಕ್ಕೆ ಅಪವಾದ ವನಿತಾಶ್ರೀ. ಇಲಾಖೆಯಲ್ಲಿರುವ ಕರಾವಳಿ ಕರ್ನಾಟಕದ ಏಕೈಕ ಮಹಿಳಾ ಲೋಕೋ ಪೈಲಟ್ ಇವರಾಗಿದ್ದಾರೆ.

ಲೋಕೋ ಪೈಲಟ್ ಹುದ್ದೆಯಲ್ಲಿರುವ ದಕ್ಷಿಣ ಕನ್ನಡದ ವನಿತಾಶ್ರೀ ಪ್ರಸ್ತುತ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಶಂಟಿಂಗ್ ಹುದ್ದೆ ನಿರ್ವಹಿಸುತ್ತಿದ್ದಾರೆ.

 ಲೋಕೋ ಪೈಲಟ್/ ಶಂಟಿಂಗ್?: ನಿರ್ದಿಷ್ಟ ನಿಲ್ದಾಣ ವ್ಯಾಪ್ತಿಯಲ್ಲಿ ರೈಲುಗಳನ್ನು ಚಲಾಯಿಸುವುದು, ಇಂಜಿನ್ ಅಥವಾ ಬೋಗಿಗಳನ್ನು ಬದಲಾಯಿಸುವುದು, ತಂಗುವ ಅಥವಾ ತಡವಾಗಿ ಹೊರಡುವ ರೈಲುಗಳನ್ನು ಪ್ರತ್ಯೇಕ ಹಳಿಯಲ್ಲಿ ತಂದು ನಿಲ್ಲಿಸುವುದು ಮುಂತಾದ ಕೆಲಸಗಳನ್ನು ಶಂಟಿಂಗ್ ವೃತ್ತಿಯಲ್ಲಿ ಇರುವವರು ನಿಭಾಯಿಸುತ್ತಾರೆ. ಈ ವಿಭಾಗದ ಸಿಬ್ಬಂದಿ ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ರೈಲು ಚಲಾಯಿಸುವುದಿಲ್ಲ.

ಲೋಕೋ ಪೈಲಟ್ ಅಂದರೆ ರೈಲು ಚಲಾಯಿಸುವವರು. ವನಿತಾಶ್ರೀ ಲೋಕೋ ಪೈಲಟ್ ಆಗಿದ್ದರೂ ಸದ್ಯ ದೂರದ ಊರುಗಳಿಗೆ ರೈಲು ಚಲಾಯಿಸುವ ಕೆಲಸ ಬೇಡ. ಇಬ್ಬರು ಮಕ್ಕಳು ಇನ್ನೂ ತುಂಬಾ ಚಿಕ್ಕವರು. ಶಂಟಿಂಗ್ ಕೆಲಸವನ್ನು ಮಾತ್ರ ಒದಗಿಸುವಂತೆ ಅವರು ಮಾಡಿಕೊಂಡ ಮನವಿಗೆ ಇಲಾಖೆ ಕೂಡ ಸದ್ಯ ಓಕೆ ಎಂದಿದೆ.

ವನಿತಾಶ್ರೀ ಪತಿ ಸತೀಶ್ ಪೊಲೀಸ್ ಇಲಾಖೆ ಉದ್ಯೋಗಿ. ಇಬ್ಬರು ಗಂಡುಮಕ್ಕಳಿದ್ದು, ಓರ್ವ ಐದನೇ ತರಗತಿ. ಇನ್ನೋರ್ವ ಒಂದನೇ ತರಗತಿ. ತಂದೆ ವಿಟ್ಲ ನಾರಾಯಣ ನಾಯ್ಕ ಪಶುಸಂಗೋಪನೆ ಇಲಾಖೆಯಲ್ಲಿ ನಿವೃತ್ತ ಕಾಂಪೌಂಡರ್. ತಾಯಿ ಜಯಶ್ರೀ ಮಂಗಳೂರು ಭವಿಷ್ಯ ನಿಧಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗೆ ಬೆಂಗಳೂರು ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.

ಚೆನ್ನೈಯಿಂದ ವೃತ್ತಿಜೀವನ: ಆರಂಭದಲ್ಲಿ ಈ ವೃತ್ತಿ ನನ್ನ ಆಯ್ಕೆಯಾಗಿರಲಿಲ್ಲ. ಮಂಗಳೂರು ಕೆಪಿಟಿಯಲ್ಲಿ ಅಟೋ ಮೊಬೈಲ್ ಡಿಪ್ಲೊಮಾ ಮುಗಿಸಿದ ಸಂದರ್ಭ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ ಇರುವ ಹಾಗೂ ಇಲಾಖೆಯಲ್ಲಿ ಇರುವ ಸೌಲಭ್ಯ ಬಗ್ಗೆ ಅಪ್ಪ ತಿಳಿಸಿದ್ದರು. ವೃತ್ತಿಗೆ ಆಯ್ಕೆಯಾದಾಗ ಧೈರ್ಯ ತುಂಬಿದರು. ಅಮ್ಮನ ಬೆಂಬಲವೂ ದೊರೆಯಿತು. 2006ರಲ್ಲಿ ಚೆನ್ನೈಯಲ್ಲಿ ಅಸಿಸ್ಟೆಂಟ್ ಲೋಕೋ ಪೈಲಟ್ ಆಗಿ ವೃತ್ತಿ ಜೀವನ ಆರಂಭಿಸಿದೆ ಎಂದು ನೆನಪಿಸಿಕೊಳ್ಳುತ್ತಾರೆ ವನಿತಾಶ್ರೀ.
ಅಪ್ಪನೇ ತಮಿಳುನಾಡಿಗೆ ಆಗಮಿಸಿ ನನ್ನ ವಾಸ್ತವ್ಯದ ವ್ಯವಸ್ಥೆ, ಸುರಕ್ಷತೆ ಬಗ್ಗೆ ಖಾತ್ರಿಪಡಿಸಿಕೊಂಡು ಊರಿಗೆ ಮರಳಿದ್ದರು. ಆಗ ಅಪ್ಪ ಮತ್ತು ಅಮ್ಮ ಇಬ್ಬರೂ ಸರ್ಕಾರಿ ಉದ್ಯೋಗದಲ್ಲಿದ್ದ ಕಾರಣ ಅವರು ನನ್ನ ಜತೆ ಉಳಿದುಕೊಳ್ಳುವಂತಿರಲಿಲ್ಲ ಎಂದವರು ವೃತ್ತಿ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

 ವನಿತಾಶ್ರೀ ಛಲ, ಸಾಧನೆ ಮೆಚ್ಚಲೇಬೇಕು. ಸುಮಾರು 116 ರೈಲ್ವೆ ನೌಕರರು ಇರುವ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಕನ್ನಡಿಗರು ಮಾತ್ರ ಇದ್ದಾರೆ. ಇವರಲ್ಲಿ ಕನ್ನಡತಿ ಮಹಿಳೆ ಇವರೊಬ್ಬರೇ. ಶಂಟಿಂಗ್ ವಿಭಾಗದಲ್ಲಿ ವೃತ್ತಿ ನಡೆಸುವ ಆರು ಮಂದಿ ನೌಕರರಲ್ಲಿ ವನಿತಾಶ್ರೀ ಹೊರತುಪಡಿಸಿ ಉಳಿದ ಆರು ಮಂದಿ ಉತ್ತರ ಭಾರತದವರು.
– ಒಲಿವರ್ ಡಿಸೋಜ, ಕಾರ್ಯಕಾರಿ ಕಾರ್ಯದರ್ಶಿ , ರೈಲು ಯಾತ್ರಿ ಸಂಘ, ಮುಂಬೈ

ಲೋಕೋ ಪೈಲಟ್ ಆಗಿ ದುಡಿಯುವವರು, ಅದೂ ಮುಖ್ಯವಾಗಿ ಹೆಣ್ಣುಮಕ್ಕಳು ವೃತ್ತಿಯನ್ನು ಸವಾಲಾಗಿ ಪರಿಗಣಿಸಲು ಸಿದ್ಧರಿರಬೇಕು. ಸಾಮಾನ್ಯವಾಗಿ ನಮ್ಮ ಕರ್ನಾಟಕದ ಹೆಣ್ಣುಮಕ್ಕಳು ಹಾಗೂ ಅವರ ಪಾಲಕರು ಇದಕ್ಕೆ ಸಿದ್ದರಿರುವುದಿಲ್ಲ. ವೃತ್ತಿಯ ಬಗ್ಗೆ ಜಾಗೃತಿ ಕೂಡ ಸಾಲದು. ಆದ್ದರಿಂದಲೇ ಕರ್ನಾಟಕದ ಕಡಿಮೆ ಜನ ರೈಲ್ವೆಯಲ್ಲಿದ್ದಾರೆ. ಕೇರಳ ಹಾಗೂ ತಮಿಳುನಾಡಿನವರು ಈ ವಿಷಯದಲ್ಲಿ ನಮಗಿಂತ ಮುಂದಿದ್ದಾರೆ.
– ವನಿತಾಶ್ರೀ, ಲೋಕೋ ಪೈಲಟ್, ಮಂಗಳೂರು

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...