ಕ್ಯಾಬ್​ ಚಾಲಕನಿಂದ ಗಾಯಕಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

ಬೆಂಗಳೂರು: ಖ್ಯಾತ ಗಾಯಕಿ ವಸುಂಧರಾ ದಾಸ್​ಗೆ ಸಿಲಿಕಾನ್​ ಸಿಟಿ ಕ್ಯಾಬ್ ಚಾಲಕನೊಬ್ಬ ಕಿರುಕುಳ ನೀಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ನಗರದ ಹೃದಯಭಾಗದಲ್ಲೇ‌ ಈ ಕೃತ್ಯ ನಡೆದಿದ್ದು, ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿ ಅಕ್ಟೋಬರ್​ 29ರಂದು ಸಂಜೆ 4.30ರ ಸುಮಾರಿಗೆ ಇಟಿಯಾಸ್​ ಕಾರ್​ ಚಾಲಕ ಗಾಯಕಿಗೆ ಕಿರುಕುಳ ನೀಡಿದ್ದಾನೆ.

KA-05 AE-3933 ಕ್ಯಾಬ್ ಚಾಲಕ ಭಾಷ್ಯಂ ಸರ್ಕಲ್ ಸಿಗ್ನಲ್‌ನಿಂದ ನನ್ನ ಕಾರನ್ನು ಹಿಂಬಾಲಿಸಿ ಮಲ್ಲೇಶ್ವರಂ 18ನೇ ಕ್ರಾಸ್ ಬಳಿ ಕಾರು ಅಡ್ಡಗಟ್ಟಿ ಕಾರಿನ ಬಾಗಿಲು ತೆರೆಯಲು ಯತ್ನಿಸಿದ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎಂದು ಗಾಯಕಿ ವಸುಂಧರಾ ದಾಸ್​ ಮಲ್ಲೇಶ್ವರಂ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಐಪಿಸಿಸೆಕ್ಷನ್ 509, 341, 354 ಮತ್ತು 504ರ ಅಡಿ ಪ್ರಕರಣ ದಾಖಲು ಪಡಿಸಿಕೊಂಡಿರುವ ಪೊಲೀಸರು, ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)