ಲೈಂಗಿಕ ಕಿರುಕುಳ ಆರೋಪ: ದುಬೈನಲ್ಲಿ ಗಾಯಕ ಮಿಕಾ ಸಿಂಗ್​ ಬಂಧನ

ದುಬೈ: ಬ್ರೆಜಿಲ್​ನ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಾಲಿವುಡ್​ನ ಖ್ಯಾತ ಗಾಯಕ ಮಿಕಾ ಸಿಂಗ್​ ಅವರನ್ನು ದುಬೈನಲ್ಲಿ ಬಂಧಿಸಲಾಗಿದೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಿಕಾ ಸಿಂಗ್​ ದುಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರು ಬ್ರೆಜಿಲ್​ನ ಯುವ ಮಾಡಲ್​ಗೆ ಅಶ್ಲೀಲ ಚಿತ್ರ ಕಳುಹಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ಜತೆಗೆ ಯುವತಿಗೆ ಬಾಲಿವುಡ್​ನಲ್ಲಿ ಅವಕಾಶ ಕೊಡಿಸುವ ಭರವಸೆ ನೀಡಿದ್ದರು ಎಂದು ಗಾಲ್ಫ್​ ನ್ಯೂಸ್​ ವರದಿ ಮಾಡಿದೆ.

ಮಿಕಾ ಸಿಂಗ್​ ರಾಜತಾಂತ್ರಿಕ ನೆರವು ಕೋರಿದ್ದಾರೆ. ಮಿಕಾಗೆ ನೆರವು ನೀಡಲು ಕುರಿತು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಚರ್ಚಿಸುತ್ತಿದ್ದಾರೆ. ಮಿಕಾ ಸಿಂಗ್​ರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮಿಕಾ ಸಿಂಗ್​ ಇದಕ್ಕೂ ಮುನ್ನ ಬಾಲಿವುಡ್​ನ ವಿವಾದಿತ ನಟಿ ರಾಖಿ ಸಾವಂತ್​ಗೆ ಒತ್ತಾಯಪೂರ್ವಕವಾಗಿ ಚುಂಬಿಸಿದ ಆರೋಪ ಎದುರಿಸುತ್ತಿದ್ದಾರೆ. (ಏಜೆನ್ಸೀಸ್​)