More

  100 ಮಿಲಿಯನ್​ ಕ್ಲಬ್​ಗೆ ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ …’

  ಬೆಂಗಳೂರು: ರಿಷಭ್​ ಶೆಟ್ಟಿ ಅಭಿನಯದ ‘ಕಾಂತಾರ’ ಚಿತ್ರವು ಜಗತ್ತಿನಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗಿ, ಇದುವರೆಗೂ 400 ಪ್ಲಸ್​ ಕೋಟಿ ಗಳಿಕೆ ಮಾಡಿದೆ. ಇನ್ನು, ಕನ್ನಡದಲ್ಲಿ ‘ಕೆಜಿಎಫ್​ 2’ ಗಳಿಕೆಯನ್ನು ಹಿಂದಿಕ್ಕಿ, ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

  ಇದನ್ನೂ ಓದಿ: ‘ಚಾಕೊಲೇಟ್ ಬಾಯ್’ ಆದ ‘ಫಿಸಿಕ್ಸ್ ಟೀಚರ್’; ಸುಮುಖನ ಹೊಸ ಚಿತ್ರ

  ಹೀಗಿರುವಾಗ, ‘ಕಾಂತಾರ’ ಚಿತ್ರವು ಸದ್ದಿಲ್ಲದೆ ಇನ್ನೊಂದು ದಾಖಲೆ ಮಾಡಿದೆ. ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿರುವ ‘ಸಿಂಗಾರ ಸಿರಿಯೇ …’ ಹಾಡು ಬಿಡುಗಡೆಗೂ ಮುನ್ನವೇ ಸಾಕಷ್ಟು ಜನಪ್ರಿಯವಾಗಿತ್ತು. ಮರಾಠಿಯ ‘ಅಪ್ಸರಾ ಆಲಿ …’ ಹಾಡಿನಿಂದ ಸ್ಫೂರ್ತಿ ಪಡೆದು ಈ ಹಾಡನ್ನು ರೂಪಿಸಲಾಗಿದೆ ಎಂಬಂತಹ ಮಾತುಗಳು ಕೇಳಿಬಂದವಾದರೂ, ಹಾಡು ದೊಡ್ಡ ಹಿಟ್​ ಆಗಿತ್ತು.

  ಇದೀಗ, ‘ಸಿಂಗಾರ ಸಿರಿಯೇ …’ ಹಾಡು ಯೂಟ್ಯೂಬ್​ನ ಹೊಂಬಾಳೆ ಫಿಲಂಸ್​ ಚಾನಲ್​ನಲ್ಲಿ ಬಿಡುಗಡೆಯಾಗಿ ಇದುವರೆಗೂ 100 ಪ್ಲಸ್​ ಮಿಲಿಯನ್​ ವೀಕ್ಷಣೆ ಕಂಡಿದೆ. ಅಂದರೆ, ಇದುವರೆಗೂ 10 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಕನ್ನಡದ ಮಟ್ಟಿಗೆ ಇದೊಂದು ಹೊಸ ದಾಖಲೆ ಎನ್ನುವಂತೇನೂ ಇಲ್ಲ. ಈಗಾಗಲೇ ‘ಪೊಗರು’ ಚಿತ್ರದ ‘ಕರಾಬು’, ‘ರಾಜ್​ಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ’, ‘ರಾಂಬೋ 2’ ಚಿತ್ರದ ‘ಚುಟುಚುಟು’ ಮುಂತಾದ ಹಾಡುಗಳು ಇದಕ್ಕೂ ಹೆಚ್ಚು ವೀಕ್ಷಣೆಯನ್ನು ಕಂಡಿವೆ. ಈಗ ‘ಸಿಂಗಾರ ಸಿರಿಯೇ’ ಸಹ 100 ಮಿಲಿಯನ್​ ಪ್ಲಸ್​ ಕ್ಲಬ್​ಗೆ ದಾಖಲಾಗಿದೆ.

  ‘ಕಾಂತಾರ’ ಚಿತ್ರವು ಸೆ. 30ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದಾಗಿ, ಕನ್ನಡ ಚಿತ್ರವು ಬಿಡುಗಡೆಯಾದ ಎರಡು ವಾರಗಳ ಅಂತರದಲ್ಲಿ ತೆಲುಗು, ತಮಿಳು ಮತ್ತು ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಡಬ್​ ಮಾಡಲಾಯಿತು.

  ಇದನ್ನೂ ಓದಿ: ಆಗ ‘ಬಾ ನಲ್ಲೆ ಮಧುಚಂದ್ರಕೆ’; ಈಗ ‘ಬಾ ನಲ್ಲೆ ಮದುವೆಗೆ’ …

  ‘ಕಾಂತಾರ’ ಚಿತ್ರವನ್ನು ಹೊಂಬಾಳೆ ಫಿಲಂಸ್​ನ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದು, ರಿಷಭ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್​, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಮುಂತಾದವರು ಅಭಿನಯಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ. ಇನ್ನು, ‘ಕಾಂತಾರ 2’ ಚಿತ್ರದ ಬರವಣಿಗೆ ಕೆಲಸಗಳು ಇತ್ತೀಚೆಗೆ ಶುರುವಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

  VIDEO: ನಟಿ ನಯನತಾರಾ ಮಕ್ಕಳ ಪೂರ್ಣ ಹೆಸರೇನು ಗೊತ್ತಾ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts