2 ವರ್ಷ 4 ತಿಂಗಳು ಮತ್ತು 18 ದಿನಗಳ ಬಳಿಕ ಪ್ರಶಸ್ತಿ ಗೆದ್ದ ಪಿವಿ ಸಿಂಧು: ಕರ್ನಾಟಕದ ಪ್ರತೀಕ್-ಪೃಥ್ವಿ ರನ್ನರ್ ಅಪ್

blank

ಲಖನೌ: ಭಾರತದ ಅಗ್ರ ಶ್ರೇಯಾಂಕಿತರಾದ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು, ಲಕ್ಷ್ಯ ಸೇನ್ ಮತ್ತು ತ್ರಿಸಾ ಜೋಲಿ-ಗಾಯತ್ರಿ ಗೋಪಿಚಂದ್ ಅವರು ಸಯ್ಯದ್ ಮೋದಿ ಇಂಟರ್‌ನ್ಯಾಷನಲ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳಾ ಸಿಂಗಲ್ಸ್, ಪುರುಷರ ಸಿಂಗಲ್ಸ್ ಮತ್ತು ಮಹಿಳಾ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪಿವಿ ಸಿಂಧು 2 ವರ್ಷ 4 ತಿಂಗಳು ಮತ್ತು 18 ದಿನಗಳ ಬಳಿಕ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಜತೆಗೆ ಸಯ್ಯದ್ ಮೋದಿ ಟೂರ್ನಿಯಲ್ಲಿ 3 ಬಾರಿ ಪ್ರಶಸ್ತಿ ಗೆದ್ದ ಸೈನಾ ನೆಹ್ವಾಲ್ ದಾಖಲೆ ಸರಿಗಟ್ಟಿದ್ದಾರೆ.

ಭಾನುವಾರ ಮುಕ್ತಾಯಗೊಂಡ ಟೂರ್ನಿಯ ಮಹಿಳಾ ಸಿಂಗಲ್ಸ್ ೈನಲ್‌ನಲ್ಲಿ ವಿಶ್ವ ನಂ.18 ಸಿಂಧು 21-14, 21-16 ನೇರಗೇಮ್‌ಗಳಿಂದ ವಿಶ್ವ ನಂ.119 ಚೀನಾದ ವು ಲುವೊ ಯು ಎದುರು ಗೆಲುವು ದಾಖಲಿಸಿದರು. 29 ವರ್ಷದ ಸಿಂಧು ಇದಕ್ಕೂ ಮುನ್ನ 2017 ಹಾಗೂ 2022ರಲ್ಲಿ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿದ್ದರು. ಹಾಲಿ ವರ್ಷ ಮಲೇಷ್ಯಾ ಮಾಸ್ಟರ್ಸ್‌ ಸೂಪರ್ 500 ಟೂರ್ನಿಯಲ್ಲಿ ೈನಲ್‌ಗೇರಿದ್ದೇ ಹಾಲಿ ಋತುವಿನ ಅತ್ಯುತ್ತಮ ನಿರ್ವಹಣೆ ಎನಿಸಿತ್ತು. 2022ರ ಸಿಂಗಾಪುರ ಓಪನ್‌ನಲ್ಲಿ ಸಿಂಧು ಕೊನೆಯದಾಗಿ ಪ್ರಶಸ್ತಿ ಗೆದ್ದಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ ಪದಕ ವಂಚಿತ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್‌ನಲ್ಲಿ 21-6, 21-7 ರಿಂದ ಸಿಂಗಾಪುರದ ಜಿಯಾ ಹೆಂಗ್ ಜೆಸನ್ ಅವರನ್ನು ಮಣಿಸಿದರು. ಇದರೊಂದಿಗೆ ಮುಂದಿನ ಋತುವಿಗೆ ಮನೋಬಲ ಹೆಚ್ಚಿಸಿಕೊಂಡರು.

ಡಬಲ್ಸ್‌ನಲ್ಲಿ ತ್ರಿಸಾ-ಗಾಯತ್ರಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಮಹಿಳಾ ಜೋಡಿ ಎನಿಸಿತು. ಕಾಮನ್ವೆಲ್ತ್ ಪದಕ ವಿಜೇತ ತ್ರಿಸಾ-ಗಾಯತ್ರಿ ಜೋಡಿ 21-18, 21-11 ರಿಂದ ಚೀನಾ ಬಾವೊ ಲಿ ಜಿಂಗ್-ಲಿ ಕಿಯಾನ್ ಎದುರು ಗೆದ್ದು ಚೊಚ್ಚಲ ಸೂಪರ್ 300 ಪ್ರಶಸ್ತಿ ಜಯಿಸಿತು.

ಡಬಲ್ಸ್‌ನಲ್ಲಿ ರನ್ನರ್ ಅಪ್
ಕರ್ನಾಟಕದ ಸಾಯಿ ಪ್ರತೀಕ್ ಮತ್ತು ಪೃಥ್ವಿ ಕೆ. ರಾಯ್ ಜೋಡಿ ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನ ಕಂಡಿತು. ಅಗ್ರ ಶ್ರೇಯಾಂಕಿತ ಸಾತ್ವಿಕ್-ಚಿರಾಗ್ ಶೆಟ್ಟಿ ಗೈರಿನಲ್ಲಿ ಆತಿಥೇಯ ಭಾರತದ ಸವಾಲನ್ನು ಯಶಸ್ವಿ ಮುನ್ನಡೆಸಿದ ಪೃಥ್ವಿ-ಸಾಯಿ ಪ್ರತೀಕ್ ಜೋಡಿ ಪ್ರಶಸ್ತಿ ಕಾದಾಟದಲ್ಲಿ 14-21, 21-19, 17-21 ರಿಂದ ಚೀನಾದ ಹುಹಾಂಗ್ ಡಿ-ಲಿಯು ಯಾಂಗ್ ಜೋಡಿ ಎದುರು 71 ನಿಮಿಷಗಳ ಕಠಿಣ ಹೋರಾಟದಲ್ಲಿ ಪರಾಭವಗೊಂಡಿತು. ಐದನೇ ಶ್ರೇಯಾಂಕಿತ ತನಿಷಾ ಕ್ರಾಸ್ಟೋ-ಧ್ರುವ ಕಪಿಲ ಮಿಶ್ರ ಡಬಲ್ಸ್ ೈನಲ್‌ನಲ್ಲಿ 21-18, 14-21, 8-21ರಿಂದ 6ನೇ ಶ್ರೇಯಾಂಕಿತ ಥಾಯ್ಲೆಂಡ್‌ನ ದೇಚಪೊಲ್ ಪುವರ್‌ನುಕ್ರೊ-ಸುಪಿಸ್ಸಾರ ಪಾವ್ಸಂಪ್ರಾನ್ ಎದುರು ನಿರಾಸೆ ಕಂಡರು.

ಈ ಗೆಲುವು ನನಗೆ ಸಾಕಷ್ಟು ಆತ್ಮವಿಶ್ವಾಸ ತುಂಬಿದೆ. ನನಗೆ 29 ವರ್ಷ ವಯಸ್ಸಾಗಿರುವುದು ಹಲವು ರೀತಿಯಲ್ಲಿ ಲಾಭದಾಯಕವೆನಿಸಿದೆ. ಯಾಕೆಂದರೆ ನನ್ನ ಬಳಿ ಹೆಚ್ಚಿನ ಅನುಭವವಿದೆ. ಖಂಡಿತವಾಗಿಯೂ ಇನ್ನೂ ಕೆಲ ವರ್ಷಗಳ ಕಾಲ ಆಡುವೆ.
ಪಿವಿ ಸಿಂಧು

 

 

 

 

 

 

 

Share This Article

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…

ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…