More

    ಶೈಕ್ಷಣಿಕ ವರ್ಷ ಪ್ರಾರಂಭಕ್ಕೂ ಮುನ್ನ ಪಠ್ಯ ಸರಬರಾಜು

    ಸಿಂಧನೂರು: ತಾಲೂಕಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಸರ್ಕಾರದಿಂದ ಶಾಲೆಗಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಲಾಗುತ್ತಿದ್ದು, ಶಿಕ್ಷಣ ಕ್ಷೇತ್ರದ ಕಾರ್ಯಗಳು ಚುರುಕುಗೊಂಡಿವೆ.

    ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪಕ್ಕದಲ್ಲಿ ಶೇಖರಿಸಿಟ್ಟಿರುವ ಪುಸ್ತಕಗಳನ್ನು ಆಯಾ ಶಾಲೆ ಮುಖ್ಯಸ್ಥರು ತೆಗೆದುಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ. ತರಗತಿಗಳು ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ, ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆವಹಿಸಲಾಗುತ್ತಿದೆ.

    ದಿನವೂ ಶಿಕ್ಷಣ ಇಲಾಖೆಯಿಂದ ತಾಲೂಕಿಗೆ ಪಠ್ಯ ಪುಸ್ತಕಗಳು ಬರುತ್ತಿದ್ದು, ಅವುಗಳನ್ನು ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಆಧಾರದಲ್ಲಿ ಸರಬರಾಜು ಮಾಡಲಾಗುತ್ತಿದ್ದು, ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ತಲೆನೋವು ತಪ್ಪಲಿದೆ.

    3,91,978 ಪುಸ್ತಕಗಳ ಪೂರೈಕೆ

    ಪ್ರಸಕ್ತ ವರ್ಷ ತಾಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು 332 ಇವೆ. ಇವುಗಳಿಗೆ ಒಟ್ಟು 3,95,443 ಲಕ್ಷ ಪುಸ್ತಕದ ಬೇಡಿಕೆಯಿದ್ದು, ಇದುವರೆಗೆ ಸರ್ಕಾರದಿಂದ 3,91,978 ಪುಸ್ತಕಗಳು ಪೂರೈಕೆ ಮಾಡಲಾಗಿದೆ. ಈ ಪೈಕಿ 3,89,900 ಸರಬರಾಜು ಮಾಡಲಾಗಿದೆ. ಈವರೆಗೆ 22 ಸಿಆರ್‌ಸಿ ವ್ಯಾಪ್ತಿಗೆ ಪುಸ್ತಕ ತಲುಪಿದ್ದು, ಇನ್ನು 4 ಸಿಆರ್‌ಸಿಗಳಿಗೆ ವಿತರಣೆ ಬಾಕಿ ಇದೆ.

    ಇದನ್ನೂ ಓದಿ: ಶಾಲೆಗಳ ಆರಂಭಕ್ಕೆ ದಿನಗಣನೆ, ಜಿಲ್ಲೆಯಲ್ಲಿ ಶೇ.99.77 ಪಠ್ಯಪುಸ್ತಕ ಪೂರೈಕೆ

    ವಿವಿಧ ಖಾಸಗಿ ಶಾಲೆಗಳಿಗೆ ಮಾರಾಟಕ್ಕಾಗಿ 1,00,351 ಪುಸ್ತಕಗಳು ಬೇಡಿಕೆ ಇದ್ದು, ಈಗಾಗಲೇ 71,755 ಪೂರೈಸಲಾಗಿದೆ. ಇನ್ನುಳಿದ 22,856 ಪುಸ್ತಕಗಳು ವಾರದಲ್ಲಿ ಸರಬರಾಜು ಆಗಲಿದೆ. ಈಗಾಗಲೇ ಈ ಹಿಂದಿನ ಎರಡು ವರ್ಷಗಳಲ್ಲಿ ಪಠ್ಯ ಪುಸ್ತಕ ಕೊರತೆಯಿಂದ ಕಲಿಕೆಗೆ ಹೆಚ್ಚಿನ ತೊಂದರೆಯಾಗಿತ್ತು.

    ಕೆಲ ಪುಸ್ತಕಗಳು ಶೈಕ್ಷಣಿಕ ವರ್ಷ ಮುಗಿದರೂ ಬಂದಿರಲಿಲ್ಲ. ಇಲಾಖೆ ಕೂಡ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಈ ಶೈಕ್ಷಣಿಕ ವರ್ಷ ಆರಂಭಕ್ಕೆ ಮುಂಚೆಯೇ ಪುಸ್ತಕ ವಿತರಣೆಗೆ ಮುಂದಾಗಿರುವುದು ಒಳ್ಳೆಯ ಸಂಗತಿಯೆಂದು ಪಾಲಕರು ಸಂತಸ ವ್ಯಕ್ತಪಡಿಸಿದರು.

    ಈ ಬಾರಿ ಶೈಕ್ಷಣಿಕ ವರ್ಷ ಆರಂಭಕ್ಕೂ ಮುಂಚೆಯೇ ಬಹುತೇಕ ಶಾಲೆಗಳಿಗೆ ಎಲ್ಲ ವಿಷಯಗಳು ಒಳಗೊಂಡಂತೆ ಪಠ್ಯ ಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ. ಇನ್ನು 10 ಸಾವಿರ ಪುಸ್ತಕ ವಿತರಣೆ ಮಾತ್ರ ಬಾಕಿ ಇದ್ದು, ಈ ಪ್ರಕ್ರಿಯೆ ಒಂದು ವಾರದಲ್ಲಿ ಪೂರ್ಣಗೊಳ್ಳಲಿದೆ. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು.
    ಶರಣಪ್ಪ ವಟಗಲ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿಂಧನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts