ಸೋಮಲಾಪುರದಲ್ಲಿ ಮೂರು ಗುಡಿಸಲು ಭಸ್ಮ

ಸಿಂಧನೂರು: ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ಬೆಂಕಿ ತಗುಲಿ ಮೂರು ಗುಡಿಸಲು ಭಸ್ಮವಾಗಿವೆ. ಗ್ರಾಮದ ಹನುಮಂತಪ್ಪ ಹೊನ್ನೂರಪ್ಪ, ಬಾಲಪ್ಪ ಎನ್ನುವವರಿಗೆ ಸೇರಿದ ಗುಡಿಸಲುಗಳು ಸುಟ್ಟಿವೆ.

ನಗದು, ಸಾಮಗ್ರಿ ಹಾಗೂ ಆಹಾರ ಧಾನ್ಯಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದೆ. ಸ್ಥಳಕ್ಕೆ ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ತಾಪಂ ಸದಸ್ಯ ಗೋವಿಂದರಾಜ್ ಭೇಟಿ ನೀಡಿ, ತಲಾ 5 ಸಾವಿರ ರೂ. ಸಹಾಯಧನ ವಿತರಿಸಿದರು. ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ ಭೇಟಿ ನೀಡಿ, ಸರ್ಕಾರಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.