ಶರಣ ಸಂಪ್ರದಾಯದಂತೆ ಮದುವೆ

ಸಿಂಧನೂರು (ರಾಯಚೂರು): ನಗರದ ಕನಕ ಮಂಗಲ ಭವನದಲ್ಲಿ ಗಟ್ಟಿಮೇಳ, ಮಂತ್ರಘೋಷ, ಅಕ್ಷತೆಗಳಿಲ್ಲದೆ 12ನೇ ಶತಮಾನದ ಬಸವಣ್ಣನವರ ತತ್ವದಡಿ ಭಾನುವಾರ ವಚನ ಮಾಂಗಲ್ಯದ ಮೂಲಕ ಜೋಡಿ ನವಜೀವನಕ್ಕೆ ಕಾಲಿರಿಸಿತು.

ತಾಲೂಕಿನ ಪಗಡದಿನ್ನಿಯ ಈಶಮ್ಮ, ಕೆ.ಅಮರಯ್ಯಸ್ವಾಮಿ ದಂಪತಿ ಪುತ್ರ ಪಿಎಸ್‌ಐ ಶರಣಬಸವ ಮತ್ತು ಶಿವಬಸಮ್ಮ ನಂದಿಕೋಲ ಮಠ ಸಿದ್ದರಾಮಯ್ಯ ದಂಪತಿ ಪುತ್ರಿ ಪ್ರತಿಭಾ ವಚನ ಮಾಂಗಲ್ಯದ ಮೂಲಕ್ಕೆ ದಾಂಪತ್ಯಕ್ಕೆ ಕಾಲಿಸಿರಿಸಿದರು. ಈ ಮದುವೆಯಲ್ಲಿ ಮಂಗಳವಾದ್ಯಗಳಿಲ್ಲ. ಮಂತ್ರಘೋಷಗಳಿಲ್ಲ. ಅಕ್ಷತೆ ಇಲ್ಲ, ಧ್ವನಿವರ್ಧಕಗಳಿರಲಿಲ್ಲ. ಶಾಸ್ತ್ರ ಸಂಪ್ರದಾಯ ಯಾವುದು ಇರಲಿಲ್ಲ. ವಧು ವರನಿಗೆ ರುದ್ರಾಕ್ಷಿ ಕಟ್ಟಿದರೆ, ವರ ವಧುವಿಗೆ ಕರಿಮಣೆ ಸರ ಕಟ್ಟುವ ಮೂಲಕ ಹೊಸ ಜೀವನಕ್ಕೆ ಕಾಲಿರಿಸಿದರು.

ಸತ್ತಿ ಬಸವಲಿಂಗ ಸ್ವಾಮೀಜಿ ಸಾರ್ಥಕ ಜೀವನದ ಪ್ರಮಾಣವಚನ ಬೋಧಿಸಿದರು. ಬಸವದೇವರು ವಚನಗಳನ್ನು ಹೇಳಿದರು. ಬಸವಕೇಂದ್ರದ ಪಿ.ವೀರಭದ್ರಪ್ಪ ಕುರುಕುಂದ, ಎಚ್.ಜಿ.ಹಂಪಣ್ಣ, ಶಾಂತಪ್ಪ ಚಿಂಚರಕಿ, ಬಸವರಾಜ ಪಗಡದಿನ್ನಿ, ಗುಂಡಪ್ಪ ಬಳಿಗಾರ ಹಾಗೂ ಬಸವ ಅನುಯಾಯಿಗಳು ಇದ್ದರು.