ಪುನೀತ್ ಬ್ಯಾನರ್‌ಗೆ ಪೊಲೀಸರ ನಿರಾಕರಣೆ


ಸಿಂಧನೂರು: ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಬುಧವಾರ ಅಪ್ಪು ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬ್ಯಾನರ್ ಹಾಕಲು ಪೊಲೀಸರು ಅನುಮತಿ ನೀಡಲಿಲ್ಲ.

ಫೆ.7ರಂದು ರಾಜ್ಯಾದ್ಯಂತ ಪುನೀತ್ ಅಭಿಯನದ ನಟಸಾರ್ವಭೌವ ಚಿತ್ರ ಬಿಡುಗಡೆಯಾಗಲಿದೆ. ಈ ಹಿನ್ನಲೆಯಲ್ಲಿ ಅಪ್ಪು ಅಭಿಮಾನಿಗಳು ಗಾಂಧಿ ವೃತ್ತದಲ್ಲಿ ಬೆಳಗ್ಗೆ 10 ಗಂಟೆಗೆ ಬ್ಯಾನರ್ ಹಾಕಲು ಮುಂದಾಗಿದ್ದರು. ಸ್ಥಳಕ್ಕೆ ಬಂದ ಶಹರ ಠಾಣೆ ಪಿಎಸ್ ಮಂಜುನಾಥ ಮತ್ತು ಗ್ರಾಮೀಣ ಠಾಣೆ ಪಿಎಸ್‌ಐ ಸಿದ್ರಾಮೇಶ ತಡೆದರು. ಬ್ಯಾನರ್ ಹಾಕಬಾರದು, ಇದಕ್ಕೆ ಅವಕಾಶವಿಲ್ಲ. ನೀವು ಹಾಕಿದರೆ ಬೇರೆಯವರು ಹಾಕುವುದು ಮುಂದುವರೆಯುತ್ತದೆ. ಇದರಿಂದ ಸಂಚಾರಕ್ಕೆ ತೊಂದರೆ ಆಗುತ್ತದೆ ಎಂದರು.

ಇದರಿಂದ ಆಕ್ರೋಶಗೊಂಡ ಅಪ್ಪು ಅಭಿಮಾನಿಗಳು, ಮಾಜಿ ಸಿಎಮ ಸಿದ್ದರಾಮಯ್ಯರ ಬ್ಯಾನರ್‌ಗೆ ಅವಕಾಶ ಕೊಡುತ್ತೀರಾ? ನಮಗೇಕೆ ಕೊಡುತ್ತಿಲ್ಲವೆಂದು ಮಾತಿನ ಚಕಮಕಿ ನಡೆಸಿದರು. ತಕ್ಷಣವೇ ಮಾಜಿ ಸಿಎಂ ಸಿದ್ದರಾಮಯ್ಯ ಬ್ಯಾನರ್ ತೆರವುಗೊಳಿಸಿ ಪರಿಸ್ಥಿತಿ ತಿಳಿಗೊಳಿಸಲಾಯಿತು.