ಸಿಂಧನೂರಿನಲ್ಲಿ ಬಿತ್ತನೆಗೆ ಸಜ್ಜಾದ ರೈತರು

blank

ಅಶೋಕ ಬೆನ್ನೂರು

ಸಿಂಧನೂರು: ತಾಲೂಕಿನಲ್ಲಿ ನಾಲ್ಕೈದು ವರ್ಷಗಳ ನಂತರ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ರೈತಾಪಿ ವರ್ಗ ಬಿತ್ತನೆಗೆ ಸಜ್ಜುಗೊಂಡಿದೆ. ಕೃಷಿ ಇಲಾಖೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಗೆ ಸಿದ್ಧತೆ ಮಾಡಿಕೊಂಡಿದೆ.

ಈ ಬಾರಿ ಮುಂಗಾರು ಪೂರ್ವ ಮಳೆ ರೈತರಲ್ಲಿ ಹರ್ಷ ಮೂಡಿಸಿದೆ. ಟೇಲೆಂಡ್ ಭಾಗ ಹಾಗೂ ತುರ್ವಿಹಾಳ ಹೋಬಳಿ ವ್ಯಾಪ್ತಿಯಲ್ಲಿ ಬಿತ್ತನೆಗೆ ಸಕಾಲವಾಗಿದೆ. ತಾಲೂಕಿನಲ್ಲಿ 1,60,150 ಹೆಕ್ಟೇರ್ ಭೌಗೋಳಿಕ ಕ್ಷೇತ್ರವಿದ್ದು, ಇದರಲ್ಲಿ 45,350 ಹೆಕ್ಟೇರ್ ಖುಷ್ಕಿ, 75,769 ಹೆಕ್ಟೇರ್ ಬಿತ್ತನೆ ಪ್ರದೇಶ ಇದೆ. 1,14,222 ಹೆಕ್ಟೇರ್‌ನಲ್ಲಿ 92,278 ಹೆಕ್ಟೇರ್ ನೀರಾವರಿ ಹಾಗೂ 21,944 ಹೆಕ್ಟೇರ್ ಖುಷ್ಕಿ ಪ್ರದೇಶದಲ್ಲಿ ಕೃಷಿ ಇಲಾಖೆ ಮುಂಗಾರು ಬಿತ್ತನೆ ಗುರಿ ಹೊಂದಿದೆ. ತಾಲೂಕಿನ ರೈತರು ಹೆಚ್ಚಾಗಿ ಭತ್ತ, ಸೂರ್ಯಕಾಂತಿ, ಸಜ್ಜೆ, ಹತ್ತಿ, ತೊಗರಿ ಬಿತ್ತನೆಗೆ ಆಸಕ್ತಿ ಹೊಂದಿದ್ದಾರೆ. ಇದರಿಂದ ಬೀಜಕ್ಕೆ ಬೇಡಿಕೆ ಹೆಚ್ಚಲಿದೆ.

ತಾಲೂಕಿನ 77,118 ಹೆಕ್ಟೇರ್‌ನಲ್ಲಿ ಭತ್ತ, 6100 ಹೆಕ್ಟೇರ್ ಸಜ್ಜೆ, 19,783 ಹೆಕ್ಟೇರ್ ತೊಗರಿ, 5,559 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆ ಹತ್ತಿ ಬೆಳೆಯುವ ಗುರಿ ಹೊಂದಿದೆ. ಕಳೆದೊಂದು ವಾರದಿಂದ ಉತ್ತಮ ಮಳೆ ಆಗುತ್ತಿರುವುದರಿಂದ ಕೃಷಿ ಇಲಾಖೆ ಈಗಾಗಲೇ ಬೇಡಿಕೆಗೆ ಅನುಗುಣವಾಗಿ ಬೀಜ, ಗೊಬ್ಬರ ಸಂಗ್ರಹ ಮಾಡಿಕೊಂಡಿದೆ. ರೈತರು ಹೆಚ್ಚಾಗಿ ಸೂರ್ಯಕಾಂತಿ ಬೀಜ ಖರೀದಿಸುತ್ತಿದ್ದಾರೆ. ತಾಲೂಕಿಗೆ ಮುಂಗಾರು ಅವಧಿಯಲ್ಲಿ 39,874 ಮೆಟ್ರಿಕ್ ಟನ್ ಗೊಬ್ಬರ ಬೇಡಿಕೆ ಇದ್ದು, ಬಿತ್ತನೆಗೆ ಬೇಕಾದ ಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಭತ್ತ ನಾಟಿ ಮಾಡುವವರೆಗೂ ಗೊಬ್ಬರ ಕೊರತೆಯಾಗಲ್ಲ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಡ್ಯಾಂ ನೀರಿನ ಆಧಾರದ ಮೇಲೆ ಭತ್ತ ನಾಟಿ

ಸಿಂಧನೂರು ತಾಲೂಕಿನಲ್ಲಿ ಹೆಚ್ಚಾಗಿ ಭತ್ತ ನಾಟಿ ಮಾಡುವ ಭೂಪ್ರದೇಶವಿದೆ. ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಹರಿಯುವ ನೀರು ಲೆಕ್ಕಾಚಾರದಲ್ಲಿ ಭತ್ತ ನಾಟಿ ನಡೆಯಲಿದೆ. ಬೇಕಾದಷ್ಟು ನೀರು ಸಂಗ್ರಹವಾಗದ ಹಿನ್ನೆಲೆಯಲ್ಲಿ ಬೇಸಿಗೆ ಬೆಳೆ ಕೈಬಿಡಲಾಗಿದೆ. ಉತ್ತಮ ಮಳೆಯಾಗಿ ಜಲಾಶಯ ತುಂಬಿದರೆ ಮಾತ್ರ ಮುಂಗಾರು ಭತ್ತ ನಾಟಿಗೆ ಸಿದ್ಧತೆ ನಡೆಯಲಿದೆ. ಟೇಲೆಂಡ್ ಭಾಗದಲ್ಲಿ ಮುಂಗಾರು ಮಳೆ ಅರ್ಭಟ ಮುಂದುವರಿದಿದ್ದು, ಈಗಾಗಲೇ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಮಳೆ ಬಿಡುವು ನೀಡಿದರೆ ಬಿತ್ತನೆಗೆ ಮುಂದಾಗಲಿದ್ದಾರೆ.

ಸಿಂಧನೂರು ತಾಲೂಕಿನಲ್ಲಿ ಮುಂಗಾರು ಪೂರ್ವ 200 ಮಿಮೀ ಮಳೆಯಾಗಿದೆ. ಬಹುತೇಕ ಎಲ್ಲ ಹೋಬಳಿಯಲ್ಲಿ ಹಸಿ ಮಳೆ ಬಿದ್ದಿದೆ. ಈಗಾಗಲೇ ವಲ್ಕಂದಿನ್ನಿ ಹಾಗೂ ತುರ್ವಿಹಾಳ ಹೋಬಳಿ ವ್ಯಾಪ್ತಿಯ ರೈತರು ಬಿತ್ತನೆ ಬೀಜ ಖರೀದಿಗೆ ಮುಂದಾಗಿದ್ದಾರೆ. ಬೀಜ, ಗೊಬ್ಬರ ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭತ್ತ ನಾಟಿಗೆ ಇನ್ನೂ ತಿಂಗಳು ಕಳೆಯಬೇಕು. ಮುಂಗಾರು ಬಿತ್ತನೆಗೆ ಕಾಲಾವಕಾಶ ಇದೆ.
| ನಜೀರ್ ಅಹ್ಮದ್ ಎಡಿ, ಕೃಷಿ ಇಲಾಖೆ, ಸಿಂಧನೂರು

Share This Article

ಬೇಯಿಸಿದ ಮತ್ತು ಹಸಿ ಬೀಟ್ರೂಟ್: ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ಗೊತ್ತಾ? Beetroots

Beetroots: ಬೀಟ್‌ರೂಟ್‌ಗಳನ್ನು ಹಸಿಯಾಗಿ ಅಥವಾ ಕುದಿಸಿ ಸೇವಿಸುವ ಅತ್ಯುತ್ತಮ ಮಾರ್ಗವು ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.…

ನೀವು ರಾತ್ರಿಯಲ್ಲಿ ಪದೇ ಪದೇ ನೀರು ಕುಡಿಯುತ್ತಿದ್ದೀರಾ? ಇದು ಆರೋಗ್ಯ ಸಮಸ್ಯೆಯ ಲಕ್ಷಣಗಳಾಗಿವೆ.. ನಿರ್ಲಕ್ಷಿಸಬೇಡಿ Drinking Water

Drinking Water : ಮಾನವನ ಆರೋಗ್ಯಕ್ಕೆ ನೀರು ಅತ್ಯಗತ್ಯ. ಆದರೆ, ನಾವು ಅದನ್ನು ಯಾವಾಗ ಕುಡಿಯುತ್ತೇವೆ…