ಸಿನಿಮಾ

ಶುಚಿತ್ವಕ್ಕಾಗಿ ನಗರಸಭೆಯೊಂದಿಗೆ ಕೈ ಜೋಡಿಸಿ

ಸಿಂಧನೂರು: ನಗರವನ್ನು ಶುಚಿತ್ವದಿಂದ ಕಾಪಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಹಾಗಾಗಿ ಜನರು ಉಪಯೋಗಕ್ಕೆ ಬಾರದ ವಸ್ತುಗಳನ್ನು ಒಂದೆಡೆ ಶೇಖರಿಸಿ ಆರ್‌ಆರ್‌ಆರ್ ಕೇಂದ್ರಕ್ಕೆ ತಲುಪಿಸಬೇಕು ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಹೇಳಿದರು.

ಇಲ್ಲಿನ ನಗರಸಭೆಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಹಾಗೂ ರಾಯಚೂರು ಜಿಲ್ಲಾಡಳಿತ ಆಶ್ರಯದಲ್ಲಿ ಏರ್ಪಡಿಸಿದ್ದ ‘ನನ್ನ ಲೈಫ್ ನನ್ನ ಸ್ವಚ್ಛ ನಗರ’ ಎಂಬ ವಿಶೇಷ ಆಂದೋಲನದಡಿ ಸ್ಥಾಪಿಸಿರುವ ಮಳಿಗೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಜೂ.05 ರವರೆಗೆ ತ್ಯಾಜ್ಯ ವಸ್ತುಗಳ ಪುನರ್ಬಳಕೆ ಮತ್ತು ಕ್ರಮಬದ್ಧವಾದ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮರುಬಳಕೆ, ಪುನರ್‌ಬಳಕೆ ಎಂಬ ತ್ಯಾಜ್ಯ ನಿರ್ವಹಣೆಯ ಮೂರು ಅಂಶಗಳನ್ನು ಒಳಗೊಂಡಿರುತ್ತದೆ.

ಕಡಿಮೆಗೊಳಿಸುವುದು, ಮರುಬಳಕೆ, ಪುನರ್‌ಬಳಕೆ ಸಿದ್ಧಾಂತದೊಂದಿಗೆ ನಮ್ಮ ದೈನಂದಿನ ಬದುಕಿನಲ್ಲಿ ಉತ್ಪತ್ತಿಯಾಗಿ ಪರಿಸರಕ್ಕೆ ಸೇರಿಕೊಳ್ಳುವ ತ್ಯಾಜ್ಯ ವಸ್ತುಗಳನ್ನು ಕಡಿಮೆಗೊಳಿಸುವುದು ಕಾರ್ಯಕ್ರಮದ ಉದ್ದೇಶದಾಗಿದೆ ಎಂದರು.

ಇದನ್ನು ಓದಿ: ವಸ್ತುಗಳ ಸಂಗ್ರಹ ಕೇಂದ್ರಕ್ಕೆ ಮರುಬಳಕೆ ವಸ್ತುಗಳು ನೀಡಿ

ಸಿಂಧನೂರು ನಗರದ ಇಂದಿರಾ ಕ್ಯಾಂಟೀನ್ ಆವರಣ, ನಗರಸಭೆ ಕಚೇರಿ ಆವರಣ, ಇಂದಿರಾ ಪ್ರಿಯದರ್ಶಿನಿ ಶಾಲೆ, ಶಿವಜ್ಯೋತಿ ನಗರದ ಹತ್ತಿರ, ಲಕ್ಷ್ಮೀ ಕ್ಯಾಂಪ್‌ನಲ್ಲಿ ಆರ್‌ಆರ್‌ಆರ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಮರುಬಳಕೆ ಮಾಡಬಹುದಾದ ಆಟಿಕೆ ವಸ್ತುಗಳು, ಬಟ್ಟೆಗಳು, ದಿನಪತ್ರಿಕೆ, ಮಾಸಪತ್ರಿಕೆ, ಪುಸ್ತಕಗಳು, ಪ್ಲಾೃಸ್ಟಿಕ್ ಚೀಲಗಳು, ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳು ಒಳಗೊಂಡಂತೆ ವಿವಿಧ ಬಗೆಯ ಹಳೆಯ ವಸ್ತುಗಳನ್ನು ಕೇಂದ್ರಗಳಲ್ಲಿ ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದರು.

ಆರೋಗ್ಯ ನಿರೀಕ್ಷಕ ಕಿಶನರಾವ ಕುಲಕರ್ಣಿ, ಸಿಬ್ಬಂದಿ ಮಹೇಶ, ಸುಧಾ, ಮಾಧುರಿ, ಲಕ್ಷ್ಮೀಪತಿ, ಜೆಇ ಶಾಂತಕುಮಾರ, ಲಿಂಗರಾಜ ಇತರರಿದ್ದರು.

ಹಳೇ ವಸ್ತು ನೀಡಿ ಉಡುಗೊರೆ ಪಡೆಯಿರಿ

ಹಳೆಯ ವಸ್ತುಗಳನ್ನು ಸ್ವಯಂ ಪ್ರೇರಣೆಯಿಂದ ಕೇಂದ್ರಗಳಿಗೆ ನೀಡುವ ನಾಗರಿಕರನ್ನು ಪ್ರೋತ್ಸಾಹಿಸುವ ಸಲುವಾಗಿ ಪುಸ್ತಕ, ಪರಿಸರ ಸ್ನೇಹಿ ಪೆನ್, ಸಾವಯವ ಗೊಬ್ಬರ, ಬಟ್ಟೆಯ ಚೀಲ, ಹೂವಿನ ಗಿಡ, ಡಿಜಿಟಲ್ ಪ್ರಮಾಣ ಪತ್ರಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಎಂದರು.

Latest Posts

ಲೈಫ್‌ಸ್ಟೈಲ್