ಶಾಮಿಯಾನ ಸಪ್ಲಾಯರ್ಸ್‌ ಸಂಘದ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದವರ ಬಂಧಿಸಿ

ಸಿಂಧನೂರು: ಶಾಮಿಯಾನ ಸಪ್ಲಾಯರ್ಸ್‌ ಸಂಘದ ರಾಜ್ಯಾಧ್ಯಕ್ಷರ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಕರ್ನಾಟಕ ಶಾಮಿಯಾನ ಸಪ್ಲಾಯರ್ಸ್‌ ಸಂಘದಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಸಿಂಧನೂರಿನಲ್ಲಿ ಜನೆವರಿಯಲ್ಲಿ ನಡೆದ ರಾಜ್ಯ ಮಟ್ಟದ ಪಶು ಮತ್ತು ಮತ್ಸ್ಯಮೇಳಕ್ಕೆ ಹಾಕಲಾಗಿದ್ದ ಶಾಮಿಯಾನ, ಸೌಂಡ್ ಸಿಸ್ಟಮ್ ಮತ್ತಿತರ ಸಾಮಗ್ರಿಗಳ ಹಣ ಪಾವತಿಗೆ ಸಂಬಂಧಿಸಿದಂತೆ ಕಮಿಷನ್ ವಿಷಯವಾಗಿ ಸಂಘದ ರಾಜ್ಯಾಧ್ಯಕ್ಷರ ಮೇಲೆ ಹಲ್ಲೆ ನಡೆಸಲಾಗಿದೆ. ಇದರಿಂದ ತಾಲೂಕಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಸಂಘದ ಅಧ್ಯಕ್ಷರ ಪರಿಸ್ಥಿತಿ ಹೀಗಾದರೆ ಉಳಿದ ವೃತ್ತಿ ಬಾಂಧವರ ಗತಿ ಏನು? ಎನ್ನುವ ಬಗ್ಗೆ ಆಲೋಚಿಸಬೇಕಿದೆ. ಹಲ್ಲೆ ಮಾಡಿದವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ. ಆದ್ದರಿಂದ ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.

ಸಂಘದ ರಾಜ್ಯಾಧ್ಯಕ್ಷ ಮಹಿಬೂಬ್ ಮುಲ್ಲಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಗುಂಡಯ್ಯಸ್ವಾಮಿ ಹಿರೇಮಠ, ಸಂಘಟನಾ ಕಾರ್ಯದರ್ಶಿ ಎಂ.ರಾಜಾಸಾಬ್, ಖಜಾಂಚಿ ಎಸ್.ಮಂಜುನಾಥ, ಉಪಾಧ್ಯಕ್ಷ ಶ್ರೀಧರ ಕಿರಗಿ, ಕೆ.ಜಿ.ತಿಪ್ಪೆಸ್ವಾಮಿ ಚಿತ್ರದುರ್ಗ, ರಫೀಕ್, ಶಿವಕುಮಾರ ಹಿರೇಮಠ, ಜಾವೀದ್‌ಖಾನ್, ದಾವೂದ್, ಶ್ರೀನಿವಾಸ, ಬಿ.ಹುಸೇನ ಉಡುಪಿ, ಉದಯ್ ಆಚಾರ್ ಇತರರಿದ್ದರು.