More

    ಶೋಷಿತರ ಧ್ವನಿ ಡಾ.ಬಿ.ಆರ್.ಅಂಬೇಡ್ಕರ್; ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಹೇಳಿಕೆ

    ಸಿಂಧನೂರು: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಶೋಷಿತರ ಪರ ಧ್ವನಿಯಾಗಿದ್ದಾರೆ. ಅವರು ಕೊಟ್ಟ ಸಂವಿಧಾನದಿಂದ ನಮ್ಮೆಲ್ಲರ ಬದುಕು ಹಸನಾಗಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಹೇಳಿದರು.

    ತಾಲೂಕಿನ ಜಂಗಮರಹಟ್ಟಿಯಲ್ಲಿ ಭಾನುವಾರ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಸಂವಿಧಾನ ಬರೆದು ಶೋಷಿತರಿಗೆ ಪ್ರಶ್ನೆ ಮಾಡುವ ಎದೆಗಾರಿಕೆ ನೀಡಿದ್ದಾರೆ. ಸಂವಿಧಾನದಿಂದಲೇ ಅನೇಕರು ಇಂದು ಎಂಎಲ್‌ಎ, ಎಂಪಿಗಳಾಗಿದ್ದಾರೆ. ಮಾಜಿ ಸಂಸದ ವೆಂಕಟೇಶ್ ನಾಯಕ ಸಮುದಾಯಕ್ಕೆ ನೀಡಿದ ಕೊಡುಗೆ ಸ್ಮರಿಸುವುದು ಅಗತ್ಯವಾಗಿದೆ ಎಂದರು.

    ಕೆಪಿಸಿಸಿ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ರಾಮಾಯಣದಂತಹ ಮಹಾ ಕಾವ್ಯವನ್ನು ಇಡೀ ವಿಶ್ವಕ್ಕೆ ನೀಡಿದ್ದಾರೆ ಎಂದರು.
    ಬಿಜೆಪಿ ಮುಖಂಡ ಪ್ರಸನ್ನ ಪಾಟೀಲ್ ಮಾತನಾಡಿ, ವಾಲ್ಮೀಕಿ ಸಮಾಜದ ಗುರುಗಳಾದ ಪ್ರಸನ್ನಾನ್ನಂದಪುರಿ ಸ್ವಾಮೀಜಿ ಅವರ ಅನಿರ್ದಿಷ್ಟ ಧರಣಿ, ಸಚಿವ ಶ್ರೀರಾಮುಲು ಸೇರಿ ವಿವಿಧ ಸಚಿವರ ನಿರಂತರ ಪ್ರಯತ್ನದಿಂದ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡಿರುವುದು ಸ್ವಾಗತಾರ್ಹ. ಇದರಿಂದ ವಾಲ್ಮೀಕಿ ಜನಾಂಗಕ್ಕೆ ಹೆಚ್ಚು ಸರ್ಕಾರಿ ಸೌಲಭ್ಯಗಳು ದೊರೆಯಲಿವೆ ಎಂದರು.

    ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಪ್ರಮುಖರಾದ ಚಂದ್ರಭೂಪಾಲ್ ನಾಡಗೌಡ, ಅಮರೇಶ ರೈತನಗರಕ್ಯಾಂಪ್, ಅರುಣ್ ಕುಮಾರ ನಾಯಕ, ವೆಂಕಟೇಶ ರಾಗಲಪರ್ವಿ, ಶಿವಣ್ಣ ನಾಯಕ, ಪಂಪಾಪತಿ ನಾಯಕ ಇದ್ದರು.

    ಮೆರವಣಿಗೆ: ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ಯ ಮಹಿಳೆಯರು ಮಳೆಯಲ್ಲೇ ಕುಂಭ-ಕಳಸಗಳೊಂದಿಗೆ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಯುವಕರು ಡಿಜೆ ಹಾಡುಗಳಿಗೆ ನೃತ್ಯ ಮಾಡಿ ಗಮನ ಸೆಳೆದರು. ಪ್ರಮುಖರಾದ ಶರಣಪ್ಪ ತಾತ, ವೀರರಾಜು, ಮೌನೇಶ ನಾಯಕ ಮಸ್ಕಿ, ಡಿ.ಜಿ. ನಾಯಕ್ ಗೋನವಾರ, ಯಂಕೋಬ ನಾಯಕ ಬೂತಲದಿನ್ನಿ, ಪ್ರದೀಪ್ ಪೂಜಾರಿ, ಶಂಕರಪ್ಪ, ವೀರಸಾಹುಕಾರ, ಚನ್ನನಗೌಡ, ಮೌನೇಶ್ ನಾಯಕ್ ಶ್ರೀನಿವಾಸ್ ಕ್ಯಾಂಪ್, ಮಲ್ಲಯ್ಯ ಮಲ್ಲಾಪುರ್, ಅಯ್ಯಪ್ಪ ತಿಮ್ಮಾಪುರ್, ರಾಮಣ್ಣ ಹಳೆವೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts