More

    ಕಾರ್ಯಕರ್ತರು ಎಚ್ಚರಿಕೆಯಿಂದ ಚುನಾವಣೆ ಎದುರಿಸಿ

    ಸಿಂಧನೂರು: ರಾಜ್ಯದಲ್ಲಿ ಮತದಾರರು ಬದಲಾವಣೆ ಬಯಸಿದ್ದಾರೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

    ನಗರದ ತಹಸಿಲ್ ಕಚೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದರು. ಚುನಾವಣೆ ಚುರುಕಿನಿಂದ ಕೂಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಕೆಯಿಂದ ಚುನಾವಣೆ ಎದುರಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಎಲ್ಲ ಮೂನ್ಸೂಚನೆಗಳಿವೆ ಎಂದರು.

    ಇದನ್ನೂ ಓದಿ: ಜಗದೀಶ್ ಶೆಟ್ಟರ್, ಸವದಿ ಕಾಂಗ್ರೆಸ್‌ಗೆ ಬಂದ ಮೇಲೆ‌ 150 ಸ್ಥಾನ ಗೆಲ್ಲುವುದು ಖಚಿತವಾಗಿದೆ: ಡಿಕೆಶಿ

    ಮೆರವಣಿಗೆ

    ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ಜಿಪಂ ಮಾಜಿ ಸದಸ್ಯರಾದ ಬಾಬುಗೌಡ ಬಾದರ್ಲಿ, ಎನ್.ಶಿವನಗೌಡ ಗೊರೇಬಾಳ, ಬಸವರಾಜ ಹಿರೇಗೌಡ, ಪ್ರಮುಖರಾದ ಪಂಪನಗೌಡ ಬಾದರ್ಲಿ, ಲಿಂಗರಾಜ ಪಾಟೀಲ್, ಎನ್.ಅಮರೇಶ, ಖಾಜಿ ಮಲ್ಲಿಕ್ ವಕೀಲ, ಡಾ.ಬಿ.ಎನ್.ಪಾಟೀಲ್, ದೊಡ್ಡನಗೌಡ ಕಲ್ಲೂರು, ಬಸವರಾಜ ಸಾಹುಕಾರ ವಕೀಲ, ಲಿಂಗಪ್ಪ ದಢೇಸುಗೂರು, ಸೈಯದ್ ಜಾಫರ್ ಜಾಗೀರದಾರ್, ಶ್ರೀದೇವಿ ಶ್ರೀನಿವಾಸ, ಅಶೋಕ ಉಮಲೂಟಿ ಇತರರಿದ್ದರು. ನಂತರ ತಹಸೀಲ್ ಕಚೇರಿಗೆ ತೆರಳಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

    ಜೆಡಿಎಸ್ ಅಭ್ಯರ್ಥಿ ಶಾಸಕ ವೆಂಕಟರಾವ ನಾಡಗೌಡ ಉಮೇದುವಾರಿಕೆ ಸಲ್ಲಿಕೆ

    ಕಾರ್ಯಕರ್ತರು ಎಚ್ಚರಿಕೆಯಿಂದ ಚುನಾವಣೆ ಎದುರಿಸಿ


    ಸಿಂಧನೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಶಾಸಕ ವೆಂಕಟರಾವ ನಾಡಗೌಡ ಮಂಗಳವಾರ ಉಮೇದುವಾರಿಕೆ ಸಲ್ಲಿಸಿದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಖಚಿತ ಎಂದು ನಾಡಗೌಡ ವಿಶ್ವಾಸ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಮಾತು ತಪ್ಪದೇ ಬದ್ಧತೆ ತೋರುವುದು ನಮ್ಮಿಂದ ಮಾತ್ರ ಸಾಧ್ಯ; ಬಿಜೆಪಿ ವಿರುದ್ಧ ಜೆಡಿಎಸ್​ ವಾಗ್ದಾಳಿ

    ಎಪಿಎಂಸಿ ಗಣೇಶ ದೇವಸ್ಥಾನದಿಂದ ತಹಸಿಲ್ ಕಚೇರಿವರೆಗೆ ಮೆರವಣಿಗೆ ನಡೆಯಿತು. ಮರುಳಸಿದ್ದೇಶ್ವರ ಸ್ವಾಮೀಜಿ, ನಗರಸಭೆ ಸದಸ್ಯ ಚಂದ್ರಶೇಖರ ಮೈಲಾರ, ಭೀಮನಗೌಡ ವಕೀಲ, ಜಿ.ಸತ್ಯನಾರಾಯಣ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಅಭಿಷೇಕ ನಾಡಗೌಡ, ಚಂದ್ರಭೂಪಾಲ ನಾಡಗೌಡ, ಧರ್ಮನಗೌಡ ಮಲ್ಕಾಪುರ, ಕೆ.ಜಿಲಾನಿ ಪಾಷಾ, ಎಂ.ಡಿ.ನದೀಮುಲ್ಲಾ, ಸುಮಿತ್ ತಡಕಲ್, ವೆಂಕಟೇಶ ನಂಜಲದಿನ್ನಿ, ನಾಗೇಶ ಹಂಚಿನಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts