ಕಸಾಪದಿಂದ ಸಮಾಜಮುಖಿ ಚಟುವಟಿಕೆ

blank

ಸಿಂಧನೂರು: ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭಾಷೆೆ, ನೆಲ, ಜಲ ಉಳಿಸುವ ಮಹತ್ವದ ಕಾರ್ಯ ನಡೆಯುತ್ತಿದ್ದು, ಅತಿ ಹೆಚ್ಚು ದತ್ತಿ ಉಪನ್ಯಾಸ ಮೂಲಕ ತಾಲೂಕು ಘಟಕ ಅತ್ಯುತ್ತಮ ಕಾರ್ಯ ಮಾಡುತ್ತಿದೆ ಎಂದು ಉದ್ಯಮಿ ರಾಜೇಶ ಹಿರೇಮಠ ಹೇಳಿದರು.

ನಗರದ ಪಟೇಲವಾಡಿ ಸರಗಣಾಧೀಶ್ವರ ಶಿವಪೂಜಾ ದೇವರಮಠದಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಸಾಪ ತಾಲೂಕು ಘಟಕ ಸಮಾಜಮುಖಿ ಕೆಲಸ ಮಾಡುತ್ತಿದೆ. ಕಾಟಾಚಾರಕ್ಕೆ ಕಾರ್ಯಕ್ರಮ ಮಾಡದೆ ಅರ್ಥಪೂರ್ಣವಾಗಿ ಮಾಡಿ, ಕನ್ನಡ ಕಂಪು ಹೆಚ್ಚಿಸಲಾಗಿದೆ ಎಂದರು.

ರಂಭಾಪುರಿ ಖಾಸಾ ಶಾಖಾಮಠ ಕರಿಬಸವ ನಗರದ ಸೋಮನಾಥ ಶಿವಾಚಾರ್ಯ, ಹೆಬ್ಬಾಳಮಠದ ಪ್ರಕಾಶ ತಾತ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ್, ದತ್ತಿ ದಾನಿ ಬೀರಪ್ಪ ಶಂಭೋಜಿ, ಹಿರಿಯ ವರ್ತಕರಾದ ಮರಿಸ್ವಾಮಿ ಹಿರೇಮಠ, ಶಾಂತಪ್ಪ ಚಿಂಚರಕಿ, ಅಮರೇಶ ಮಾಡಸಿರವಾರ, ಸರೋಜಮ್ಮ ಸರಗಣಾಧೀಶ್ವರ ಮಠ, ಆದಿ ಬಸವರಾಜ ಕೆ.ಹೊಸಳ್ಳಿ, ಲಕ್ಷಯ್ಯಸ್ವಾಮಿ ಬಾವಿಕಟ್ಟಿಮಠ, ದಾಕ್ಷಾಯಿಣಿ ಮಾಲಿಪಾಟೀಲ್ ಗೋಮರ್ಸಿ, ಕಸಾಪ ಸದಸ್ಯರಾದ ಎಸ್.ಶರಣೇಗೌಡ, ಶರಣಪ್ಪ ತೆಂಗಿನಕಾಯಿ, ಶಾಶ್ವತಸ್ವಾಮಿ ಮುಕ್ಕುಂದಿಮಠ, ನವಲಿ ಮಲ್ಲಯ್ಯಸ್ವಾಮಿ, ಬಸಯ್ಯ ಹಂಪನಾಳ, ಮಮತಾ ಹಿರೇಮಠ, ಅಮರಯ್ಯಸ್ವಾಮಿ ಹಿರೇಮಠ ಅಲಬನೂರ, ವೀರೇಶ ಅಂತರಗಂಗಿ ಇದ್ದರು.

Share This Article

ಐಸ್​​ಕ್ಯೂಬ್​​ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ ನಿಮ್ಮ ಸೌಂದರ್ಯ ಹೆಚ್ಚುತ್ತದೆ! ತಜ್ಞರು ಏನು ಹೇಳುತ್ತಾರೆ? Ice cube Remedy

Ice cube Remedy : ಮುಖ ಸುಂದರವಾಗಿ ಕಾಣಲು ಅನೇಕ ಜನರು ವಿವಿಧ ಸಲಹೆಗಳನ್ನು ಅನುಸರಿಸುತ್ತಾರೆ.…

ಈ ನಕ್ಷತ್ರದಲ್ಲಿ ಹುಟ್ಟಿದ ಗಂಡಸರು ತಮ್ಮ ಪತ್ನಿಯರನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ! Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಬಿಸಾಡ್ತೀರಾ? ಹಣ್ಣಿನ ಸಿಪ್ಪೆ ತಿಂದ್ರೆ ಪುರುಷರಿಗೆ ಆ ಸಾಮರ್ಥ್ಯ ಹೆಚ್ಚಾಗುವುದು! watermelon

watermelon: ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು  ಕಲ್ಲಂಗಡಿ ಹಣ್ಣು. ನಾವು ಕಲ್ಲಂಗಡಿ ಹಣ್ಣುಗಳನ್ನು…