ಬಿಜೆಪಿ ಸೇರಿದ ಜೆಡಿಎಸ್ ಜಿಪಂ ಸದಸ್ಯ

ಸಿಂಧನೂರು: ತಾಲೂಕಿನ ರಾಗಲಪರ್ವಿ ಜಿಪಂ ಜೆಡಿಎಸ್‌ನ ಹಾಲಿ ಸದಸ್ಯ ಎನ್.ಶಿವನಗೌಡ ಗೊರೇಬಾಳ ತಮ್ಮ ಬೆಂಬಲಿಗರೊಂದಿಗೆ ನಗರದ ಬಿಜೆಪಿ ಕಚೇರಿಯಲ್ಲಿ ಕನಕಗಿರಿ ಶಾಸಕ ಬಸವರಾಜ ದಢೇಸುಗೂರು, ಮಾಜಿ ಸಚಿವ ಸಾಲೋಣಿ ನಾಗಪ್ಪ, ಕೊಲ್ಲಾ ಶೇಷಗಿರಿರಾವ ನೇತೃತ್ವದಲ್ಲಿ ಭಾನುವಾರ ಬಿಜೆಪಿ ಸೇರ್ಪಡೆಯಾದರು.

ನಂತರ ಮಾತನಾಡಿದ ಶಿವನಗೌಡ, ಜಿಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುವ ಬಗ್ಗೆ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಬಿಜೆಪಿ ರಾಜ್ಯ ಕಾರ‌್ಯಕಾರಣಿ ಸದಸ್ಯ ಕೊಲ್ಲಾ ಶೇಷಗಿರಿರಾವ, ಮಧ್ವರಾಜ್ ಆಚಾರ್ಯ, ಬಿಜೆಪಿ ನಗರ ಅಧ್ಯಕ್ಷ ಅಡಿವೆಪ್ಪ ಓತೂರು, ಬಸವರಾಜ ಸಿಂಧನೂರು, ಹನುಮಂತಪ್ಪ ಪುಲದಿನ್ನಿ, ಅಮರೇಶ, ಯಲ್ಲುಸಾ ಬದಿ ಇದ್ದರು.