ನನ್ನ ಜನ್ಮದಲ್ಲಿ ಮೋಸದ ರಾಜಕಾರಣ ಮಾಡಿಲ್ಲ – ಮಾಜಿ ಶಾಸಕ ಹಂಪನಗೌಡ

ಸಿಂಧನೂರು: ನನ್ನ ಜನ್ಮದಲ್ಲಿ ಮೋಸದ ರಾಜಕಾರಣ ಮಾಡಿಲ್ಲ. ಮಾಡುವ ಅಗತ್ಯವು ನಮಗಿಲ್ಲ. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪರಿಗೆ ಟಿಕೆಟ್ ನೀಡುವಂತೆ ಮಸ್ಕಿ ಶಾಸಕರು, ನಾವು ಹೈಕಮಾಂಡ್‌ಗೆ ಮನವಿ ಮಾಡಿದ್ದು ನಿಜ. ಆದರೆ ಹೈಕಮಾಂಡ್ ರಾಜಶೇಖರ ಹಿಟ್ನಾಳರಿಗೆ ಟಿಕೆಟ್ ನೀಡಿದೆ. ಇದರಿಂದ ಅಸಮಾಧಾನವಿಲ್ಲ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಶೇಖರ ಹಿಟ್ನಾಳ ಪರವಾಗಿ ಕೆಲಸ ಮಾಡುತ್ತೇವೆ. ಹಿಟ್ನಾಳ ಅಧಿಕ ಬಹುಮತದಿಂದ ಗೆದ್ದು ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಕಾಂಗ್ರೆಸ್ ಪಾತ್ರ ಹಿರಿದಾಗಿದೆ. ಪಕ್ಷ ತತ್ವ, ಸಿದ್ಧಾಂತ, ಬಡವರ, ಕಾರ್ಮಿಕರ ಅಭಿವೃದ್ಧಿ ಆಲೋಚನೆ ಹೊಂದಿದೆ. 65 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಹಸಿವು ಮುಕ್ತ ಭಾರತ ಮಾಡುವಲ್ಲಿ ಹೆಚ್ಚಿನ ಶ್ರಮವಹಿಸಿದೆ ಎಂದರು.

ರೌಡಕುಂದ ಜಿಪಂ ಸದಸ್ಯ ಬಸವರಾಜ ಹಿರೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಸೈಯ್ಯದ್ ಜಾಫರ ಜಹಗೀರ್‌ದಾರ, ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್ ವಕೀಲ, ಶರಣೇಗೌಡ ಗಿಣಿವಾರ, ಅನಿಲಕುಮಾರ ಇತರರಿದ್ದರು.

ಕಳೆದ ಐದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಶೂನ್ಯವಾಗಿದೆ. ಭರವಸೆಗಳೆಲ್ಲ ಹುಸಿಯಾಗಿವೆ. ರಾಮಜನ್ಮ ಭೂಮಿಯಲ್ಲಿ ರಾಮದೇವಸ್ಥಾನ, ದೇಶಕ್ಕೆ ಒಂದೇ ಕಾನೂನು, ಕಪ್ಪು ಹಣ ತರುವುದು ಸೇರಿ ಎಲ್ಲವು ಬರೀ ಸುಳ್ಳು ಆಶ್ವಾಸನೆಗೆ ಸೀಮಿತವಾಗಿವೆ.
|ಹಂಪನಗೌಡ ಬಾದರ್ಲಿ ಮಾಜಿ ಶಾಸಕ